alex Certify ಅಪ್ರಾಪ್ತರ ಟಾರ್ಗೆಟ್ ಮಾಡುವ ಜಾಹೀರಾತುಗಳನ್ನು ಬ್ಲಾಕ್ ಮಾಡಲಿರುವ ಗೂಗಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತರ ಟಾರ್ಗೆಟ್ ಮಾಡುವ ಜಾಹೀರಾತುಗಳನ್ನು ಬ್ಲಾಕ್ ಮಾಡಲಿರುವ ಗೂಗಲ್

ಅಪ್ರಾಪ್ತ ವಯಸ್ಸಿನ ಮಂದಿಯನ್ನು ವಯಸ್ಸು, ಲಿಂಗ ಅಥವಾ ಇತರೆ ಹಿತಾಸಕ್ತಿಗಳ ವಿಚಾರವಾಗಿ ಟಾರ್ಗೆಟ್ ಮಾಡಿ ಕೊಡುವ ಜಾಹೀರಾತುಗಳನ್ನು ಬ್ಲಾಕ್ ಮಾಡುವ ಪ್ಲಾನ್ ಅನ್ನು ಗೂಗಲ್ ಮಾಡಿದೆ.

ತನ್ನ ಪ್ಲಾಟ್‌ಫಾರಂಗಳ ಮೂಲಕ ಮಕ್ಕಳನ್ನು ಗುರಿಯಾಗಿಸಿ ಬಿತ್ತರಿಸುವ ಜಾಹೀರಾತುಗಳ ಕಾರಣದಿಂದಾಗಿ ಗೂಗಲ್ ಭಾರೀ ಟೀಕೆಗೆ ಗ್ರಾಸವಾಗಿದೆ. 2022ರಲ್ಲಿ ದುರ್ಬಲ ಸಮೂಹದ ಹಿತರಕ್ಷಣೆಗೆ ಆದ್ಯತೆ ಕೊಟ್ಟು, ತನ್ನ ಬಳಕೆದಾರರು ಜಾಹೀರಾತು ಅನುಭವಗಳನ್ನು ನಿಯಂತ್ರಿಸುವ ಅವಕಾಶ ಕೊಡುವುದಾಗಿ ಗೂಗಲ್ ತಿಳಿಸಿದೆ.

ಗರ್ಭಿಣಿ ಅರಣ್ಯ ಸಿಬ್ಬಂದಿಯನ್ನ ಅಮಾನುಷವಾಗಿ ಥಳಿಸಿದ ಮಾಜಿ ಸರಪಂಚ್…!

ಜಾಲತಾಣವನ್ನು ಪ್ರೈವೆಸಿ ಸ್ಯಾಂಡ್‌ಬಾಕ್ಸ್‌ ಮೂಲಕ ಬಳಕೆದಾರರ ಖಾಸಗಿತನವನ್ನು ಇನ್ನಷ್ಟು ರಕ್ಷಿಸುವ ಸಂಬಂಧ ತನ್ನ ಕ್ರೋಮ್ ಬ್ರೌಸರ್‌‌ ಸಮಗ್ರ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಗೂಗಲ್ ತಿಳಿಸಿದೆ.

’ಅಬೌಟ್ ದಿಸ್ ಆಡ್‌’ನಂಧ ಫೀಚರ್‌ಗಳಂಥ ಹೊಸ ಆವಿಷ್ಕಾರಗಳ ಮೂಲಕ ಜಾಹೀರಾತುಗಳನ್ನು ಏಕೆ ತೋರಲಾಗುತ್ತದೆ ಮತ್ತು ಅದರ ಜಾಹೀರಾತುದಾರ ಯಾರೆಂದು ತಿಳಿಸುವುದಾಗಿ ಗೂಗಲ್ ತಿಳಿಸಿದೆ.

ಯೂಟ್ಯೂಬ್‌ನಲ್ಲಿ ಬಳಕೆದಾರರು ಆಲ್ಕೋಹಾಲ್‌ ಮತ್ತು ಜೂಜಾಟದಂಥ ಸೂಕ್ಷ್ಮ ವಿಚಾರಗಳಿರುವ ಜಾಹೀರಾತುಗಳನ್ನು ಆಫ್ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...