alex Certify ಕಾರಿನ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತ ವ್ಯಕ್ತಿ ಕಂಡು ಜನ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಮೇಲೆ ಕುಕ್ಕರುಗಾಲಿನಲ್ಲಿ ಕುಳಿತ ವ್ಯಕ್ತಿ ಕಂಡು ಜನ ಕಂಗಾಲು

ಇಲ್ಲೊಬ್ಬ ಕಾರಿನ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದಾನೆ. ಅಮೆರಿಕಾದ ವ್ಯೋಮಿಂಗ್ ನಲ್ಲಿ ವ್ಯಕ್ತಿಯೊಬ್ಬ ಈ ರೀತಿ ಕಾರಿನ ಮೇಲೆ ಕೂತಿದ್ದನ್ನು ಗೂಗಲ್ ಸ್ಟ್ರೀಟ್ ವ್ಯೂ ಕಾರೊಂದರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಅವನೊಟ್ಟಿಗೆ ಹೆಂಗಸು ಮತ್ತು ಮಗುವಿನ ಚಿತ್ರ ಕೂಡ ಇದ್ದು, ಜನರು ನಾನಾ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

ಈ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದು, ಕೆಲವರು ಇವನು ಬಹಿರ್ದೆಸೆಗೆ ಹೋಗುತ್ತಿದ್ದಾನೆ ಎಂದು ಹೇಳಿದರೆ, ಕೆಲವರು ಇದು ಅವನ ಕಾರು ಇರದೇ ಇರಬಹುದು, ಮತ್ಯಾರದ್ದೋ ಕಾರಿನಲ್ಲಿ ಈ ರೀತಿ ಗಲೀಜು ಮಾಡುತ್ತಿರುವುದೇಕೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಅವನ ಫೋಟೋ ಬ್ಲರ್ ಆದ ಕಾರಣ ಆತ ಏನು ಮಾಡುತ್ತಿದ್ದಾನೆ ಎಂಬುದು ಮಾತ್ರ ಯಾರಿಗೂ ಸ್ಪಷ್ಟ ಗೊತ್ತಾಗುತ್ತಿಲ್ಲ.

ಕಾಮದಾಹಕ್ಕೆ ಬಲಿಯಾದ ಮಹಿಳೆ: ಕೆಲಸಗಾರನೊಂದಿಗೆ ಸರಸವಾಡುವಾಗಲೇ ಸಿಕ್ಕಿ ಬಿದ್ದ ಸೊಸೆ, ಪ್ರಿಯಕರನ ಜೀವತೆಗೆದ ಮಾವ

ಇನ್ನು ಕೆಲವರು ಇವನ ಪ್ಯಾಂಟ್ ಹಾಗೆ ಇದೆ, ಹಾಗಾಗಿ ಈತ ಬಹಿರ್ದೆಸೆಗೆ ಹೋಗುತ್ತಿಲ್ಲ ಎಂದು ವಾದಿಸಿದ್ದಾರೆ. ಬಹುಶ ತನ್ನ ಕಾರಿನ ಮೇಲ್ಛಾವಣಿಯನ್ನು ಅಡ್ಜಸ್ಟ್ ಮಾಡುತ್ತಿದ್ದಾನೆ ಎಂದು ಕೂಡ ಹೇಳಿದ್ದಾರೆ. ಸ್ಪಷ್ಟವಾಗಿ ಕಾಣದ ಈ ಫೋಟೋ ಮಾತ್ರ ಜನರಿಗೆ ನಾನಾ ರೀತಿಯಲ್ಲಿ ಕಾಣುತ್ತಿದ್ದು, ಸೂಜಿಗವೆನಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...