alex Certify ‘ಗೂಗಲ್’ ಸರ್ಚ್ ಬಳಸಲು ಮುಂದಾದಾಗ ಇಂದು ನಿಮಗೂ ಎದುರಾಯ್ತಾ ಈ ಸಮಸ್ಯೆ ? ಇಲ್ಲಿದೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೂಗಲ್’ ಸರ್ಚ್ ಬಳಸಲು ಮುಂದಾದಾಗ ಇಂದು ನಿಮಗೂ ಎದುರಾಯ್ತಾ ಈ ಸಮಸ್ಯೆ ? ಇಲ್ಲಿದೆ ಇದರ ಹಿಂದಿನ ಕಾರಣ

ಮಂಗಳವಾರ ಬೆಳಿಗ್ಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಬಳಕೆದಾರರು ಗೂಗಲ್ ಸರ್ಚ್ ಮಾಡಲು ಮುಂದಾದಾಗ ಸಮಸ್ಯೆ ಎದುರಿಸಿದ್ದಾರೆ. ಇಂತಹ ವಿಷಯಗಳನ್ನು ಟ್ರ್ಯಾಕ್ ಮಾಡುವ downdetector.com ಸಹ ಗೂಗಲ್ ಸರ್ಚ್ ಡೌನ್ ಆಗಿರುವುದನ್ನು ಖಚಿತಪಡಿಸಿದೆ.

40,000ಕ್ಕೂ ಅಧಿಕ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿದ್ದು ಕೆಲವರಿಗೆ ಸರ್ಚ್ ಮಾಡುವಾಗ 502 ಎರರ್ ಸಂದೇಶ ಬಂದರೆ ಮತ್ತೆ ಕೆಲವರಿಗೆ ತಾಂತ್ರಿಕ ದೋಷದಿಂದ ಈ ಸಮಸ್ಯೆ ಎದುರಾಗಿದೆ. ನಮ್ಮ ಪರಿಣಿತರು ಇದನ್ನು ಪರೀಕ್ಷಿಸುತ್ತಿದ್ದು, ಆದಷ್ಟು ಬೇಗನೆ ಸರಿಪಡಿಸುವುದಾಗಿ 500 ಎರರ್ ಸಂದೇಶ ಬಂದಿದೆ.

ಗೂಗಲ್ ಸರ್ಚ್ ಡೌನ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಬಳಕೆದಾರರು ಇದನ್ನು ಹಂಚಿಕೊಂಡಿದ್ದು, ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಆದರೆ ಕೆಲ ಹೊತ್ತಿನಲ್ಲೇ ಗೂಗಲ್ ಇದನ್ನು ಸರಿಪಡಿಸಿದ್ದು, ಬಳಕೆದಾರರು ಈ ಮೊದಲಿನಂತೆ ಸರ್ಚ್ ಮಾಡಲು ಅನುವು ಮಾಡಿಕೊಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...