alex Certify ಪ್ರಪಂಚಕ್ಕೆ ಅಂತಿಮ ವಿದಾಯ ಹೇಳಿದ ಸೂಪರ್ ಮಾಮ್; ಪೆಂಚ್ ಸಂರಕ್ಷಣಾ‌ ಪ್ರದೇಶದಲ್ಲಿದ್ದ ಹೆಣ್ಣು ಹುಲಿ‌ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪಂಚಕ್ಕೆ ಅಂತಿಮ ವಿದಾಯ ಹೇಳಿದ ಸೂಪರ್ ಮಾಮ್; ಪೆಂಚ್ ಸಂರಕ್ಷಣಾ‌ ಪ್ರದೇಶದಲ್ಲಿದ್ದ ಹೆಣ್ಣು ಹುಲಿ‌ಸಾವು

ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿದ್ದ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. ಶನಿವಾರ ಈ ಘಟನೆ ನಡೆದಿದ್ದು, ಹದಿನಾರು ವರ್ಷ ವಯಸ್ಸಾಗಿದ್ದ ಹುಲಿ ವಯೋಸಹಜವಾಗಿ ಸಾವನ್ನಪ್ಪಿದೆ.

ಪಿಟಿಆರ್ ನಲ್ಲಿದ್ದ ಸಿಬ್ಬಂದಿಗಳು ಹಾಗೂ ವಿಸಿಟರ್ಸ್ ಗಳಿಂದ ಕಾಲರ್ ವಾಲಿ ಎಂದು ಹೆಸರು ಪಡೆದಿದ್ದ ಈ ಹೆಣ್ಣು ಹುಲಿಯ ನಿಜವಾದ ಹೆಸರು T-15. ಅಲ್ಲದೇ ಈ ಹುಲಿಯನ್ನು ಸೂಪರ್ ಮಾಮ್ ಎಂದು ಕರೆಯಲಾಗುತ್ತಿತ್ತು.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ಡಾ. ನರೋತ್ತಮ್ ಮಿಶ್ರಾ ಹುಲಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅಲ್ಲದೇ, ಸೂಪರ್ ಮಾಮ್‌ಗೆ ಕೊನೆಯ ನಮಸ್ಕಾರ. 29 ಮರಿಗಳಿಗೆ ಜನ್ಮ ನೀಡಿರುವ ಪೆಂಚ್ ಟೈಗರ್ ರಿಸರ್ವ್‌ನ ‘ಕಾಲರ್‌ವಾಲಿ ಟೈಗ್ರೆಸ್’ ಸಾವಿನ ಸುದ್ದಿ ದುಃಖಕರವಾಗಿದೆ. ಮಧ್ಯಪ್ರದೇಶವು ಟೈಗರ್ ಸ್ಟೇಟ್ ಎಂದು ಗುರುತಿಸಲ್ಪಟ್ಟಿದೆ. ರಾಜ್ಯಕ್ಕೆ ಈ ಹೆಸರು ಬರಲು ಕಾಲರ್ ವಾಲಿಯ ಕೊಡುಗೆ ಮಹತ್ವದ್ದು, ಎಂದು ಟ್ವೀಟ್ ಮಾಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೆ ಪೆಂಚ್ ಹುಲಿಸಂರಕ್ಷಣಾ ಪ್ರದೇಶಕ್ಕೆ ಬಂದ ಈ ಹೆಣ್ಣುಹುಲಿಗೆ T-15 ಎಂದು ಹೆಸರಿಡಲಾಗಿತ್ತು. ಆದರೆ ಇಲ್ಲಿಯ ಜನ ಈ ಹುಲಿಯನ್ನ ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲಾ ಈವರೆಗೂ ಈ ಹುಲಿ 29 ಮರಿಗಳಿಗೆ ಜನ್ಮ ನೀಡಿರುವುದಕ್ಕೆ ಈಕೆಯನ್ನ ಸೂಪರ್ ಮಾಮ್ ಎಂದು ಕರೆಯುತ್ತಿದ್ದರು.

— Dr Narottam Mishra (@drnarottammisra) January 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...