alex Certify ಪ್ರವಾಸಿಗರಿಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ನಂದಿ ಹಿಲ್ಸ್ ಗೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ನಂದಿ ಹಿಲ್ಸ್ ಗೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭ

ಬೆಂಗಳೂರು : ನಂದಿಬೆಟ್ಟಕ್ಕೆ ತೆರಳುವ ಪ್ರವಾಸಿರಿಗೆ ಗುಡ್ ನ್ಯೂಸ್..ಇಂದಿನಿಂದ ಬೆಂಗಳೂರಿನಿಂದ ‘ನಂದಿ ಹಿಲ್ಸ್’ ಗೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭವಾಗಿದೆ.

ಬೆಂಗಳೂರು ನಿವಾಸಿಗಳು ಎಲೆಕ್ಟ್ರಿಕ್ ರೈಲು ಹತ್ತುವ ಮೂಲಕ ನಗರದಿಂದ 60 ಕಿ.ಮೀ ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಪ್ರಯಾಣಿಸಬಹುದು.

ರೈಲು ಸಂಖ್ಯೆ 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, ರೈಲು ಸಂಖ್ಯೆ 06535/06535-06533 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು ರೈಲು ಸಂಖ್ಯೆ 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಈ ಮಾರ್ಗದಲ್ಲಿ ಸೇವೆ ನೀಡಲಿವೆ.

ಪ್ರಸ್ತುತ, 16549/16550 ಸಂಖ್ಯೆಯ ರೈಲು ಕೆಎಸ್ಆರ್ ಬೆಂಗಳೂರು – ಕೋಲಾರ- ಕೆಎಸ್ಆರ್ ಬೆಂಗಳೂರು ಡೆಮು ಮತ್ತು ರೈಲು ಸಂಖ್ಯೆ 06387/06388 ಕೆಎಸ್ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತವೆ.

ನೈಋತ್ಯ ರೈಲ್ವೆಯ ಉದ್ದೇಶಿತ ರೈಲು ಬೆಳಿಗ್ಗೆ 6:37 ಕ್ಕೆ ನಂದಿ ಹಾಲ್ಟ್ ನಿಲ್ದಾಣವನ್ನು ತಲುಪಲಿದೆ. ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ಆನಂದಿಸಲು ಬಯಸುವವರಿಗೆ ಇದು ತುಂಬಾ ತಡವಾಗಿರಬಹುದು ಎಂದು ಪ್ರಯಾಣ ಪ್ರಿಯರು ಹೇಳುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಈಶಾ ಫೌಂಡೇಶನ್ ನಿರ್ಮಿಸಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ಭೇಟಿ ನೀಡುವವರಿಗೂ ಈ ರೈಲು ಅನುಕೂಲವಾಗಲಿದೆ. ಪ್ರಸ್ತಾವಿತ ಎಲೆಕ್ಟ್ರಿಕ್ ರೈಲು ಬೆಟ್ಟಹಲಸೂರು, ದೊಡ್ಡಜಾಲ ಮತ್ತು ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...