alex Certify BIG NEWS : ತಾ.ಪಂ ನೌಕರರಿಗೆ ಗುಡ್ ನ್ಯೂಸ್ : ವೇತನ ಪಾವತಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ತಾ.ಪಂ ನೌಕರರಿಗೆ ಗುಡ್ ನ್ಯೂಸ್ : ವೇತನ ಪಾವತಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ

ಬೆಂಗಳೂರು : ತಾ.ಪಂ ನೌಕರರಿಗೆ ಗುಡ್ ನ್ಯೂಸ್ ಎಂಬಂತೆ ವೇತನ ಪಾವತಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ವಿವಿಧ ತಾಲ್ಲೂಕು ಪಂಚಾಯಿತಿಗಳ ಹಾಗೂ ಅವುಗಳ ವ್ಯಾಪ್ತಿಯ ಇಲಾಖೆಗಳಲ್ಲಿ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ, ದಿನಗೂಲಿ ನೌಕರರ ವೇತನ ಹಾಗೂ ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ ಒಟ್ಟು ರೂ.959.91ಲಕ್ಷಗಳನ್ನು ಬಿಡುಗಡೆಗೊಳಿಸಲು ಪ್ರಸ್ತಾಪಿಸಿದೆ. ಪ್ರಸ್ತಾವನೆಯನ್ನು ಪರಿಶೀಲಿಸಿ ತಾಲ್ಲೂಕ ಪಂಚಾಯತ್ ಕಾರ್ಯಕ್ರಮದಡಿ ರೂ.959.91ಲಕ್ಷಗಳನ್ನು ಲೆಕ್ಕ ಶೀರ್ಷಿಕೆ 2515-00-197-1-10- 300ರಿಂದ ಬಿಡುಗಡೆಗೊಳಿಸಲು ನಿರ್ಣಯಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದ ಕಾಲಂ 2ರ ತಾಲ್ಲೂಕು ಪಂಚಾಯತಿಗೆ ಕಾಲಂ 3 ಕಾರ್ಯಕ್ರಮದಡಿ ಬಾಕಿ/ಪ್ರಸಕ್ತ ಸಾಲಿನ ವೇತನ ವೆಚ್ಚಕ್ಕಾಗಿ, ದಿನಗೂಲಿ ನೌಕರರ ಹಾಗೂ ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ ಅಗತ್ಯವಿರುವ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.959.91ಲಕ್ಷ (ರೂಪಾಯಿ ಒಂಬತ್ತು ನೂರ ಐವತ್ತೊಂಬತ್ತು ಲಕ್ಷದ ತೊಂಬತ್ತೊಂದು ಸಾವಿರ ಮಾತ್ರ) ಬಿಡುಗಡೆಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...