alex Certify ಪ್ರಯಾಣಿಕರಿಗೆ ಗುಡ್ ನ್ಯೂಸ್ : ಸಾರಿಗೆ ಬಸ್ ನಲ್ಲಿ ಇನ್ಮುಂದೆ ‘UPI’ ಮೂಲಕವೂ ಟಿಕೆಟ್ ಖರೀದಿಸ್ಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಸಾರಿಗೆ ಬಸ್ ನಲ್ಲಿ ಇನ್ಮುಂದೆ ‘UPI’ ಮೂಲಕವೂ ಟಿಕೆಟ್ ಖರೀದಿಸ್ಬಹುದು

ಬೆಂಗಳೂರು : ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ‘UPI’ ಮೂಲಕವೂ ನೀವು ಟಿಕೆಟ್ ಖರೀದಿಸಬಹುದು. ಹೌದು. ಇಂತಹದ್ದೊಂದು ಯೋಜನೆಯನ್ನು ಸಾರಿಗೆ ಇಲಾಖೆ ಜನರಿಗೆ ಪರಿಚಯಿಸಿದೆ.

ನಿನ್ನೆಯಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಗ್ರಾಮಾಂತರ ಡಿಪೋ-3ರಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನಂತರ ಎಲ್ಲಾ ಬಸ್ ಗಳಲ್ಲಿ ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ. ಇದರಿಂದ ಪ್ರಯಾಣಿಕರು ಹಾಗೂ ಕಂಡಕ್ಟರ್ ಚಿಲ್ಲರೆಗಾಗಿ ಪರದಾಡುವ ಸ್ಥಿತಿ ಬರುವುದಿಲ್ಲ. ಚಿಲ್ಲರೆ ಇಲ್ಲದ ಪ್ರಯಾಣಿಕರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು. ಸದ್ಯ, ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೆ ಎಲ್ಲಾ ಬಸ್ ಗಳಲ್ಲೂ ಜಾರಿಗೆ ಬರಲಿದೆ

ಕ್ಯೂ ಆರ್ ಕೋಡ್ ಗೆ ಮನವಿ ಮಾಡಿದ್ದ ವ್ಯಕ್ತಿ

KSRTC ಯನ್ನು ಯಾವಾಗ BHIM UPI ತಂತ್ರಜ್ಞಾನಕ್ಕೆ ಒಳಪಡಿಸುತ್ತೀರ? ಇನ್ನು ಎಷ್ಟು ದಿನ ಪ್ರಯಾಣಿಕರು ಮತ್ತು KSRTC ನಿರ್ವಾಹಕರು ಚಿಲ್ಲರೆ ಸಮಸ್ಯೆಯಿಂದ ಜಗಳವಾಡಬೇಕು? ಎಲ್ಲ ನಿರ್ವಾಹಕರಿಗೂ BHIM UPI QR code lable ಅವರ ಕೊರಳಿಗೆ ಹಾಕಿ,ಅವರ ಮೊಭೈಲ್ ನಂಬರ್ ಗೆ ಮೇಸೆಜ್ ಬರುವ ಹಾಗೆ ಮಾಡಿ,ಚಿಲ್ಲರೆ ಸಮಸ್ಯೆ ತಪ್ಪುತ್ತದೆ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...