alex Certify ಮುಂಬೈ: ಎಸಿ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ‌ʼಗುಡ್‌ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ: ಎಸಿ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ‌ʼಗುಡ್‌ ನ್ಯೂಸ್ʼ

ಭಾರತೀಯ ರೈಲ್ವೇಯು ಮುಂಬೈನ ಉಪ ನಗರ ರೈಲ್ವೇ ಸೇವೆ ಎಸಿ ಲೋಕಲ್ ರೈಲುಗಳ ಗರಿಷ್ಠ ದರವನ್ನು ಪ್ರಸ್ತುತ 220 ರೂ.ನಿಂದ 80 ರೂ.ಗೆ ಇಳಿಸಲು ಯೋಜಿಸುತ್ತಿದೆ. ಇದರ ಹೊರತಾಗಿ, 5 ಕಿಲೋಮೀಟರ್ ದೂರದವರೆಗಿನ ಗರಿಷ್ಠ ದರವು 65 ರೂ.ಗಳಿಂದ 10 ರೂ.ಗೆ ಇಳಿಯುವ ನಿರೀಕ್ಷೆ ಸಹ ಇದೆ.

ಈ ಸಂಬಂಧ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ಇತರ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ರೈಲುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಭಾರತೀಯ ರೈಲ್ವೇ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಸಂಬಂಧ ರೈಲ್ವೇ ಇಲಾಖೆ ಶೀಘ್ರದಲ್ಲೇ ನಿರ್ಣಯ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

ಬೆಚ್ಚಿಬೀಳಿಸುವಂತಿದೆ ಈ ಆನ್‌ ಲೈನ್‌ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

ಇದೇ ವೇಳೆ, ಮೆಟ್ರೋ ತತ್ಸಮಾನವಾದ ಸೇವೆಗಳ ಟಿಕೆಟ್ ದರಗಳ ಪಟ್ಟಿಯನ್ನೂ ಸಹ ಸಿದ್ಧಪಡಿಸಲಾಗಿದ್ದು, ರೈಲ್ವೇ ಸಚಿವಾಲಯಕ್ಕೆ ಕಳುಹಿಸಲಾಗಿದೆ.

ಮಾಯಾನಗರಿಯ ಕೇಂದ್ರ ಹಾಗೂ ಪಶ್ಚಿಮ ಮಾರ್ಗಗಳಲ್ಲಿ ಕಳೆದ ಕೆಲ ತಿಂಗಳುಗಳಿಂದ ಅನೇಕ ಎಸಿ ಲೋಕಲ್ ರೈಲುಗಳು ಓಡುತ್ತಿದ್ದರೂ, ಈ ಗಾಡಿಗಳಿಗೆ ಪ್ರಯಾಣಿಕರು ಹೇಳಿಕೊಳ್ಳುವ ಮಟ್ಟದಲ್ಲಿ ಬರುತ್ತಿಲ್ಲ. ಟಿಕೆಟ್ ದರಗಳು ತೀರಾ ಹೆಚ್ಚಿರುವ ಕಾರಣ ಹೀಗೆ ಆಗಿರಬಹುದು ಎಂಬ ಕಾರಣದಿಂದ ಸಂಬಂಧ ಪಟ್ಟ ಸಂಸ್ಥೆಗಳು ಈ ವಿಚಾರವಾಗಿ ಬದಲಾವಣೆ ತರಲು ಚಿಂತನೆ ಮಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...