alex Certify ಮಾರುತಿ ಕಾರ್ ಮಾಲೀಕರಿಗೆ ಬಿಗ್‌ ರಿಲೀಫ್:‌ ವಾರಂಟಿ ಅವಧಿ ವಿಸ್ತರಿಸಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುತಿ ಕಾರ್ ಮಾಲೀಕರಿಗೆ ಬಿಗ್‌ ರಿಲೀಫ್:‌ ವಾರಂಟಿ ಅವಧಿ ವಿಸ್ತರಿಸಿದ ಕಂಪನಿ

ಕೋವಿಡ್ ಸಾಂಕ್ರಮಿಕದ ಕಾರಣದಿಂದ ವಾಹನ ಸಂಚಾರ ನಿರ್ಬಂಧಗೊಂಡಿರುವ ಕಾರಣ ಹಾಗೂ ತನ್ನ ಸರ್ವಿಸ್ ಕೇಂದ್ರಗಳು ಕೆಲಸ ಮಾಡದೇ ಇದ್ದಿದ್ದರಿಂದಾಗಿ ಆಟೋಮೊಬೈಲ್ ದಿಗ್ಗಜ ಮಾರುತಿ ಸುಜ಼ುಕಿ ತನ್ನ ಗ್ರಾಹಕರಿಗೆ ಉಚಿತ ಸರ್ವಿಸ್‌ನ ವಾರಂಟಿಯನ್ನು ವಿಸ್ತರಿಸಿದೆ.

ವೇಶ್ಯಾವಾಟಿಕೆಗೆ ಬಾಲಕಿ ಬಳಕೆ, 7 ಮಂದಿಯಿಂದ ನಿರಂತರ ಅತ್ಯಾಚಾರ; ಗರ್ಭಿಣಿಯಾದ ನಂತರ ಪೊಲೀಸರಿಗೆ ದೂರು

ಮಾರ್ಚ್‌ 15, 2021 ಹಾಗೂ ಜೂನ್ 30, 2021ರ ನಡುವೆ ವಾರಂಟಿ ಅವಧಿ ಮುಕ್ತಾಯಗೊಂಡ ವಾಹನಗಳಿಗೆ ಮಾತ್ರವೇ ಈ ಡೆಡ್‌ಲೈನ್ ವಿಸ್ತರಣೆ ಅನ್ವಯಿಸಲಿದೆ. ಜುಲೈ 31, 2021ರವರೆಗೂ ವಾರಂಟಿಯ ಅವಧಿಯನ್ನು ವಿಸ್ತರಿಸಲಿದೆ.

ಕೋವಿಡ್‌ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

“ಸಾಂಕ್ರಮಿಕ ಕಾಲಘಟ್ಟದಲ್ಲಿ ನಿರ್ಬಂಧಿತ ಚಾಲನೆ ಇರುವ ಕಾರಣ ನಮ್ಮ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಈ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್ ಸಡಿಲಿಸಿದ ಬಳಿಕ ಗ್ರಾಹಕರು ಈ ಸೇವೆಗಳ ಪ್ರಯೋಜನ ಪಡೆದುಕೊಳ್ಳಬಹುದು. ವರ್ಕ್‌ಶಾಪ್‌ ಭೇಟಿ ಮಾಡಲು ಸಾಧ್ಯವಾಗದ ಮಂದಿಗೆ ಪಿಕ್‌ಅಪ್ & ಡ್ರಾಪ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ” ಎಂದು ಮಾರುತಿ ಸುಜ಼ುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿದೇರ್ಶಕ (ಸರ್ವೀಸ್) ಪಾರ್ಥೋ ಬ್ಯಾನರ್ಜಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...