alex Certify `SC-ST’ ಸಮುದಾಯದ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್ : ಸರಳ ಮದುವೆಗೆ 1 ಲಕ್ಷ ರೂ. ಸಹಾಯಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`SC-ST’ ಸಮುದಾಯದ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್ : ಸರಳ ಮದುವೆಗೆ 1 ಲಕ್ಷ ರೂ. ಸಹಾಯಧನ

ಬೆಂಗಳೂರು :  ಬಿಬಿಎಂಪಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಹಾಗೂ ಪೌರಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪೌರಕಾರ್ಮಿಕರ ಹೆಣ್ಣುಮಕ್ಕಳ ಸರಳ ವಿವಾಹಕ್ಕೆ 1 ಲಕ್ಷ ರೂ. ಸಹಾಯಧನ ನೀಡುವ ಯೋಜನೆ ಆರಂಭಿಸಲು ಸಿದ್ಧತೆ ನಡೆಸಿದೆ.

ಬಿಬಿಎಂಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಹಾಗೂ ಪೌರಕಾರ್ಮಿಕರ ಹೆಣ್ಣು ಮಕ್ಕಳ ಸರಳ ವಿವಾಹಕ್ಕೆ 1 ಲಕ್ಷ ರೂ. ಸಹಾನಧ ನೀಡಲು ಮುಂದಾಗಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿ 3 ವರ್ಷಕ್ಕೂ ಹೆಚ್ಚು ದಿನ ವಾಸ ಮಾಡಿರಬೇಕು. ಆಧಾರ್, ಬಿಪಿಎಲ್, ಜಾತಿ ಮತ್ತು ಆಧಾರ್ ದೃಢೀಕರಣ ಪತ್ರ ಇರಬೇಕು. ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ಮೀರಿರಬಾದು. ಪೌರಕಾರ್ಮಿಕರಿಗೆ ಆದಾಯ ಮಿತಿ ಇರುವುದಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...