alex Certify ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಗುಡ್​ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂಕಷ್ಟದ ಸಂದರ್ಭದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಗುಡ್​ ನ್ಯೂಸ್

ಪ್ರಮುಖ ಐಟಿ ಕಂಪನಿಯಾದ ವಿಪ್ರೋ ತನ್ನ ಉದ್ಯೋಗಿಗಳಿಗೆ ಗುಡ್​ ನ್ಯೂಸ್​ ಒಂದನ್ನ ನೀಡಿದೆ. ಸೆಪ್ಟೆಂಬರ್​ 1ರಿಂದ ಅನ್ವಯವಾಗುವಂತೆ ಕಂಪನಿಯ ಎಲ್ಲಾ ಕಿರಿಯ ಉದ್ಯೋಗಿಗಳಿಗೆ ವೇತನ ಏರಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ.

ವಿಪ್ರೋ ಲಿಮಿಟೆಡ್​​ ಸೆಪ್ಟೆಂಬರ್ 1ನೇ ತಾರೀಕಿನಿಂದ ಅನ್ವಯವಾಗುವಂತೆ ಸಹಾಯಕ ವ್ಯವಸ್ಥಾಪಕ ಹಾಗೂ ಅದರ ಕೆಳಗಿನ ಎಲ್ಲಾ ಅರ್ಹ ನೌಕರರಿಗೆ ವೇತನ ಹೆಚ್ಚಳ ಮಾಡಲಿದೆ.

ಈ ಹಿಂದೆ ಜನವರಿ 1 ನೇ ತಾರೀಕಿನಿಂದು ಸಂಬಳ ಏರಿಕೆ ಮಾಡುವ ಬಗ್ಗೆ ಕಂಪನಿ ಘೋಷಣೆ ಮಾಡಿತ್ತು, ಇದು ಈ ವರ್ಷದಲ್ಲಿ ಎರಡನೇ ಬಾರಿಗೆ ಮಾಡಿದ ಸಂಬಳ ಏರಿಕೆಯಾಗಿದೆ ಎಂದು ವಿಪ್ರೋ ಹೇಳಿದೆ.

ಈ ಹಿಂದೆ ಮಾಡಿದ ಘೋಷಣೆಯ ಪ್ರಕಾರ ಸಿ1 ಬ್ಯಾಂಡ್​​ನಲ್ಲಿ ಕೆಲಸ ಮಾಡುವ ನೌಕರರಿಗೆ ಜೂನ್​ 1ರಿಂದ ಸಂಬಳ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿ ಇಲ್ಲಿಯವರೆಗೆ ಎಷ್ಟು ಪ್ರತಿಶತ ಸಂಬಳ ಏರಿಕೆ ಮಾಡಲಿದೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ. ಬೆಂಗಳೂರು ಮೂಲದ ಕಂಪನಿ ಸಾಮಾನ್ಯವಾಗಿ ಜೂನ್​ನಲ್ಲಿಯೆ ಸಂಬಳ ಏರಿಕೆ ಮಾಡುತ್ತಾ ಬಂದಿದೆ.

ವಿಪ್ರೋ ಕೆಲಸಗಾರರನ್ನ ಐದು ಬ್ಯಾಂಡ್​ಗಳ ( ಎ ದಿಂದ ಇ) ಆಧಾರದಲ್ಲಿ ವರ್ಗೀಕರಿಸಲಾಗುತ್ತದೆ. ಕೆಲಸದ ಅನುಭವದ ಆಧಾರದ ಮೇಲೆ ಈ ಬ್ಯಾಂಡ್​ಗಳು ನಿರ್ಧರಿತವಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...