alex Certify ರಾಜ್ಯ ಪ್ರಾಥಮಿಕ ಶಾಲೆಗಳ `ಅಂಗವಿಕಲ ಶಿಕ್ಷಕ’ರಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಪ್ರಾಥಮಿಕ ಶಾಲೆಗಳ `ಅಂಗವಿಕಲ ಶಿಕ್ಷಕ’ರಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ‘ಸಿ’ ಗುಂಪಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಅಂಗವಿಕಲ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1)ರ ಸರ್ಕಾರದ ಆದೇಶದಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಗುಂಪು ‘ಸಿ’ ಮತ್ತು ಡಿ’ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ನೂರು ಬಿಂದುಗಳಿಗೆ ಶೇಕಡ 4 ರಂತೆ ಮೀಸಲಾತಿಯನ್ನು ಕಲ್ಪಿಸುವ ಕುರಿತು ಆದೇಶವಾಗಿರುತ್ತದೆ. ಈ ಸಂಬಂಧ ಉಲ್ಲೇಖ (2)ರ ಈ ಕಛೇರಿಯ ಪತ್ರದಲ್ಲಿ ಅಂಗವೈಕಲ್ಯವನ್ನುಳ್ಳ ಸರ್ಕಾರಿ ನೌಕರರಿಗೆ ಮೀಸಲಾತಿ ನೀಡುವ ಕುರಿತಂತೆ ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿ ಅಂಶಗಳ ಕುರಿತು ಕೋರಲಾಗಿತ್ತು.

ಸರ್ಕಾರದ ಆದೇಶ  ದಿನಾಂಕ;28-03-2023 ರನ್ವಯ ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ ‘ಸಿ’ ಗುಂಪಿನ ಸರ್ಕಾರಿ ನೌಕರರಿಗೆ ಗುಂಪು-‘ಡಿ ಮತ್ತು ಗುಂಪು-ಸಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿನ ವಿವಿದ ಹುದ್ದೆಗಳನ್ನು ಗುರುತಿಸುವ ಬಗ್ಗೆ ದಿನಾಂಕ: 07/09/2023 ರಂದು ಇಲಾಖಾ ಅಧಿಕಾರಿಗಳು ಹಾಗೂ ಜಿಲ್ಲಾ ಆಸ್ಪತ್ರೆಯ ಸರ್ಜನ್ ರವರು ಮತ್ತು ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಯನ್ನೊಳಗೊಂಡ ಸಮಿತಿಯು ಚರ್ಚಿಸಿದೆ.

ಪ್ರಾಥಮಿಕ ಶಾಲಾ ಶಿಕ್ಷಕರುಗಳ ವೃಂದಗಳಿಗೆ ಸಂಬಂಧಪಟ್ಟಂತ ಈ ಪೂರ್ವದಲ್ಲಿ 2012ರಲ್ಲಿ ಜಾರಿಯಲ್ಲಿದ್ದ ಅಂಗವಿಕಲತೆಯ ಮೀಸಲಾತಿ ಸರ್ಕಾರದ ಆದೇಶದ ಅಂಶಗಳನ್ನು ಮತ್ತು ಪ್ರಸ್ತುತದ ಕಾಯ್ಕೆ ನಿಯಮಗಳಂತೆ ವರ್ಗೀಕರಿಸಲಾಗಿರುವ ವಿವಿಧ ಅಂಗವೈಕಲ್ಯತೆಗಳನ್ನು ಗಮನಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...