alex Certify GOOD NEWS: ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಭರ್ಜರಿ ಅವಕಾಶ; DRDO CEPTAMನಲ್ಲಿ 1900 ಹುದ್ದೆಗಳಿಗೆ ನೇಮಕಾತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಭರ್ಜರಿ ಅವಕಾಶ; DRDO CEPTAMನಲ್ಲಿ 1900 ಹುದ್ದೆಗಳಿಗೆ ನೇಮಕಾತಿ…!

ಉದ್ಯೋಗಾಕಾಂಕ್ಷಿಗಳಿಗೆ ಖುಷಿ ಸುದ್ದಿಯೊಂದಿದೆ. DRDO CEPTAM ನಲ್ಲಿ 1900 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ನ ಹಿರಿಯ ತಾಂತ್ರಿಕ ಸಹಾಯಕ-B (STA-B) ಮತ್ತು ತಂತ್ರಜ್ಞ-A (Tech-A) ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 3 ರಂದು ಪ್ರಾರಂಭವಾಗುತ್ತದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಸೆಪ್ಟೆಂಬರ್ 23 ಕೊನೆಯ ದಿನಾಂಕ. ಸಂಸ್ಥೆಯಲ್ಲಿ ಒಟ್ಟು 1,901 ಹಿರಿಯ ತಾಂತ್ರಿಕ ಸಹಾಯಕ ಮತ್ತು ತಂತ್ರಜ್ಞರ ಹುದ್ದೆಗಳನ್ನು ಭರ್ತಿ ಮಾಡಲು DRDO ಮೂಲಕ ನೇಮಕಾತಿ ನಡೆಸಲಾಗುತ್ತಿದೆ.

DRDO CEPTAM ನೇಮಕಾತಿ 2022: ಹುದ್ದೆಯ ವಿವರ

ಹಿರಿಯ ತಾಂತ್ರಿಕ ಸಹಾಯಕ-ಬಿ: ಒಟ್ಟು 1,075 ಹುದ್ದೆಗಳು ತಂತ್ರಜ್ಞ-A: ಒಟ್ಟು 826 ಹುದ್ದೆಗಳು

DRDO CEPTAM ನೇಮಕಾತಿ 2022: ಶೈಕ್ಷಣಿಕ ಅರ್ಹತೆ

ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್: ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ವಿಜ್ಞಾನ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಂಜಿನಿಯರಿಂಗ್, ತಂತ್ರಜ್ಞಾನದಲ್ಲಿ ಡಿಪ್ಲೊಮಾ, ಅಲೈಡ್ ವಿಷಯಗಳಲ್ಲಿ ಬ್ಯಾಚುಲರ್ ಪದವಿ ಕಡ್ಡಾಯವಾಗಿದೆ. ತಂತ್ರಜ್ಞ: 10ನೇ ತರಗತಿಯ ಪ್ರಮಾಣಪತ್ರ, ಹುದ್ದೆಗೆ ಅರ್ಜಿ ಸಲ್ಲಿಸಲು ಐಟಿಐ ಪ್ರಮಾಣಪತ್ರ ಕಡ್ಡಾಯವಾಗಿದೆ. ಒಂದು ವೇಳೆ ಐಟಿಐ ಅಗತ್ಯ ವಿಭಾಗದಲ್ಲಿ ಪ್ರಮಾಣಪತ್ರ/ಎನ್‌ಟಿಸಿ/ಎನ್‌ಎಸಿ ನೀಡದಿದ್ದರೆ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ ಒಂದು ವರ್ಷದ ಅವಧಿಯ ಪ್ರಮಾಣಪತ್ರದ ಅಗತ್ಯವಿದೆ.

DRDO CEPTAM ನೇಮಕಾತಿ 2022: ವಯಸ್ಸಿನ ಮಿತಿ

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 28 ವರ್ಷದೊಳಗಿನವರಾಗಿರಬೇಕು.

DRDO CEPTAM ನೇಮಕಾತಿ 2022: ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ – ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಟ್ರೇಡ್/ಸ್ಕಿಲ್ ಟೆಸ್ಟ್.

DRDO CEPTAM ನೇಮಕಾತಿ 2022: ವೇತನ ಶ್ರೇಣಿ

ಹಿರಿಯ ತಾಂತ್ರಿಕ ಸಹಾಯಕ: 7ನೇ CPC ಪೇ ಮ್ಯಾಟ್ರಿಕ್ಸ್ ಪ್ರಕಾರ 35,400 ರಿಂದ 1,12,400 ರೂಪಾಯಿ ವೇತನ. ತಂತ್ರಜ್ಞ: 7ನೇ CPC ಪೇ ಮ್ಯಾಟ್ರಿಕ್ಸ್ ಪ್ರಕಾರ 19,900 ರಿಂದ 63,200 ರೂಪಾಯಿ ವೇತನ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ಅಧಿಕೃತ ವೆಬ್‌ಸೈಟ್ – drdo.gov.in ಅನ್ನು ಪರಿಶೀಲಿಸಬೇಕು ಎಂದು ಡಿಆರ್‌ಡಿಓ ಸಲಹೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...