alex Certify ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಗೋಲ್ಡ್​​ಮನ್​ ಸ್ಯಾಚ್ಸ್ ನಲ್ಲಿ 2000ಕ್ಕೂ ಅಧಿಕ ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಗೋಲ್ಡ್​​ಮನ್​ ಸ್ಯಾಚ್ಸ್ ನಲ್ಲಿ 2000ಕ್ಕೂ ಅಧಿಕ ಉದ್ಯೋಗಾವಕಾಶ

ಗೋಲ್ಡ್​​ಮನ್​ ಸ್ಯಾಚ್ಸ್​ ಕಂಪನಿಯು 2023ರ ವೇಳೆಗೆ 2000 ಹೊಸ ಉದ್ಯೋಗಿಗಳನ್ನ ನೇಮಿಸಿಕೊಳ್ಳೋದಾಗಿ ಹೇಳಿದೆ. ಭಾರತದಲ್ಲಿ ತನ್ನ ಜಾಗತಿಕ ಕೇಂದ್ರವನ್ನ ವಿಸ್ತರಿಸುವ ಸಲುವಾಗಿ ಈ ಕಂಪನಿಯು ಹೈದರಾಬಾದ್​ನಲ್ಲಿ ಹೊಸ ಕಚೇರಿಯನ್ನ ತೆರೆಯುತ್ತಿರೋದಾಗಿ ಘೋಷಣೆ ಮಾಡಿದೆ.

ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳನ್ನ ಗಮನದಲ್ಲಿರಿಸಿ ಈ ವರ್ಷದ ಮಾರ್ಚ್​ ತಿಂಗಳಿನಲ್ಲಿ ಕಂಪನಿ ತೆರೆಯುವ ಕಾರ್ಯ ಆರಂಭವಾಗಿದೆ. ಪ್ರಸ್ತುತ 250 ಉದ್ಯೋಗಿಗಳನ್ನ ಈ ಕಂಪನಿಯು ಹೊಂದಿದೆ. 2021ರ ಅಂತ್ಯದಲ್ಲಿ 800 ಉದ್ಯೋಗಿಗಳಿಗೆ ಕೆಲಸ ನೀಡಲಿದ್ದೇವೆ. 2023ರ ವೇಳೆಗೆ 2500ರಷ್ಟು ಉದ್ಯೋಗಾವಕಾಶವನ್ನ ಕಲ್ಪಿಸಲಿದ್ದೇವೆ ಎಂದು ಗೋಲ್ಡ್​ಮನ್​ ಸ್ಯಾಚ್ಸ್​ ಹೇಳಿದೆ.

ನೂತನ ಕಚೇರಿಯನ್ನು ತೆಲಂಗಾಣ ಐಟಿ ಹಾಗೂ ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್​ ಉದ್ಘಾಟನೆ ಮಾಡಿದ್ರು. ಚೇರ್​ಮನ್​ ಹಾಗೂ ಚೀಫ್​ ಎಕ್ಸಿಕ್ಯೂಟಿವ್​ ಡೇವಿಡ್​ ಎಂ ಸೊಲೋಮೊನ್​​ ಕೂಡ ಈ ವಿಚಾರವಾಗಿ ಮಾತನಾಡಿ ಈ ನೂತನ ಕಚೇರಿಯ ಮೂಲಕ ಜಾಗತಿಕವಾಗಿ ಇನ್ನಷ್ಟು ಹೆಚ್ಚಿನ ಖ್ಯಾತಿ ಸಂಪಾದಿಸಲಿದ್ದೇವೆ ಎಂಬ ನಂಬಿಕೆಯಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...