alex Certify ಆಭರಣ ಪ್ರಿಯರಿಗೆ ಬಿಗ್ ಶಾಕ್​: ಚಿನ್ನ – ಬೆಳ್ಳಿ ದರದಲ್ಲಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ ಪ್ರಿಯರಿಗೆ ಬಿಗ್ ಶಾಕ್​: ಚಿನ್ನ – ಬೆಳ್ಳಿ ದರದಲ್ಲಿ ಏರಿಕೆ

ಕಳೆದ ಎರಡು ದಿನಗಳಿಂದ ದೇಶದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ದರ ಇಂದು ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಎಂಸಿಎಕ್ಸ್​​ನಲ್ಲಿ ಚಿನ್ನದ ದರ 0.08 ಪ್ರತಿಶತ ಏರಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 49,166 ರೂಪಾಯಿ ಆಗಿದೆ.

ಬೆಳ್ಳಿ ದರ ಕೂಡ 0.21 ಪ್ರತಿಶತ ಏರಿಕೆಯಾಗಿದ್ದು ಒಂದು ಕೆಜಿ ಬೆಳ್ಳಿಯ ದರ 71,382 ರೂಪಾಯಿ ಆಗಿದೆ. ಕಳೆದ ಎರಡು ದಿನಗಳಿಂದ ಚಿನ್ನದಂತೆ ಬೆಳ್ಳಿಯ ದರ ಕೂಡ ಇಳಿಕೆಯಾಗಿತ್ತು.

ಯುಎಸ್​ ಬಾಂಡ್​ ಇಳುವರಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಯುಎಸ್​ ಹಣದುಬ್ಬರದ ದತ್ತಾಂಶ ಹಾಗೂ ಈ ವಾರ ನಡೆಯಲಿರುವ ಯುರೋಪಿಯನ್​ ಸೆಂಟ್ರಲ್​​​ ಬ್ಯಾಂಕ್​ ನೀತಿಯ ಸಭೆಯಿಂದಾಗಿ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಹಳದಿ ಲೋಹ ಮತ್ತೆ ತನ್ನ ದರದಲ್ಲಿ ಏರಿಕೆಯನ್ನ ತೋರಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...