ಮುಂಬೈ ನಿವಾಸಿ, ದಿವ್ಯಾಂಗಿ ಪ್ರವೀಣ್ ಭಂಡೇಕರ್ ಎಂಬ 41 ವರ್ಷದ ಈ ವ್ಯಕ್ತಿ ತಮ್ಮ ಜೀವಿತದಲ್ಲಿ 25ನೇ ಬಾರಿ ರಕ್ತದಾನ ಮಾಡಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ರಕ್ತದಾನ ಮಾಡಲು ಆರಂಭಿಸಿದ ಪ್ರವೀಣ್, 2002ರಿಂದಲೇ ಈ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಮ್ಮ ಎಡಗೈ ಪೂರ್ಣವಾಗಿ ಸಕ್ರಿಯವಾಗಿಲ್ಲದ ಪ್ರವೀಣ್, ಮಾತನಾಡಲು ಸ್ವಲ್ಪ ಕಷ್ಟಪಡುತ್ತಾರೆ.
ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…?
ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಎಂಆರ್‌ಡಿಎ) ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ಅವರು ತಮ್ಮ ಬಲಗೈನಿಂದ ರಕ್ತದಾನ ಮಾಡುತ್ತಾರೆ.
1000 ಕೆಜಿ ಲೆಗ್ ಪ್ರೆಸ್ ಮಾಡಿ ವಿಶ್ವದಾಖಲೆ ನಿರ್ಮಾಣ
“ಮೊದಲ ಬಾರಿಗೆ ರಕ್ತದಾನ ಮಾಡುವ ವೇಳೆ ಬಹಳ ಭಯವಿತ್ತು. ಆದರೆ, ವೈದ್ಯರೊಂದಿಗೆ ಮಾತನಾಡಿದಾಗ ನನಗೆ ಹಾಗೆಲ್ಲಾ ಏನೂ ಆಗುವುದಿಲ್ಲ ಎಂದು ಧೈರ್ಯ ತುಂಬಿದಾಗ ನನ್ನ ಬಲಗೈನಿಂದ ರಕ್ತದಾನ ಮಾಡಲು ಆರಂಭಿಸಿದ್ದೇನೆ” ಎಂದು ಪ್ರವೀಣ್ ತಿಳಿಸುತ್ತಾರೆ.