alex Certify ಅಡುಗೆ ಮಾಡುವಾಗ ಪಸೂರಿ ಹಾಡು, 20 ಮಿಲಿಯನ್ ವೀಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮಾಡುವಾಗ ಪಸೂರಿ ಹಾಡು, 20 ಮಿಲಿಯನ್ ವೀಕ್ಷಣೆ

ಪಾಕಿಸ್ತಾನಿ ಹಾಡು ಪಸೂರಿ ಈಗ ಸಾಕಷ್ಟು ಚರ್ಚೆಯಲ್ಲಿದೆ. ಕೋಕ್ ಸ್ಟುಡಿಯೋ ಸೀಸನ್ 14ರಲ್ಲಿ ಬಿಡುಗಡೆಯಾದ ಟ್ರ್ಯಾಕ್ ಹಲವು ಜನರ ಹೃದಯ ಗೆದ್ದಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರಭಾವಿಗಳವರೆಗೆ ಎಲ್ಲರೂ ಸದ್ಯ ಈ ಹಾಡಿಗೆ ಕುಣಿಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಸಂಖ್ಯಾತ ಅಪ್‌ಲೋಡ್‌ಗಳು ಬಂದಿವೆ.

ಇದೀಗ ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಪಸೂರಿ ಹಾಡುವ ಹುಡುಗಿಯ ವಿಡಿಯೊ ವೈರಲ್ ಆಗಿದ್ದು, ಜನ‌ಮೆಚ್ಚುಗೆ ಗಳಿಸಿದೆ.

ಮುಂಬೈನ ಗಾಯಕಿ ಶಾಲಿನಿ ದುಬೆ ಅವರು ಪಸೂರಿ ಹಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅವರ ಪಸೂರಿ ವೀಡಿಯೊ ಪೋಸ್ಟ್ 20 ಮಿಲಿಯನ್ ವೀಕ್ಷಣೆ ಕಂಡಿದೆ.

ಈ ಅಡುಗೆ ಮನೆ ಸಿಂಗರ್ ಧ್ವನಿ ಮತ್ತು ಹಾಡುವ ಕೌಶಲ್ಯವನ್ನು ನೆಟ್ಟಿಗರು ಇಷ್ಟ ಪಟ್ಟಿದ್ದಾರೆ. ಅವರ ಪೋಸ್ಟ್ ಕಾಮೆಂಟ್‌ ವಿಭಾಗಕ್ಕೆ ನೂರಾರು ಮೆಚ್ಚುಗೆ ಅಭಿಪ್ರಾಯ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...