alex Certify ನದಿ ಮೇಲೆ ಜೋಕಾಲಿಯಲ್ಲಿ ಜೀಕುವ ವೇಳೆ ನೀರಿಗೆ ಬಿದ್ದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿ ಮೇಲೆ ಜೋಕಾಲಿಯಲ್ಲಿ ಜೀಕುವ ವೇಳೆ ನೀರಿಗೆ ಬಿದ್ದ ಮಹಿಳೆ..!

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿಡಿಯೊಗಳು ವೈರಲ್‌ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ನಾಯಿಯ ತುಂಟಾಟ, ಮಕ್ಕಳ ಕಳ್ಳಾಟ, ದಂಪತಿಗಳ ಮುದ್ದಾಟ. ಹೀಗೆ ಹಲವು ಆಕರ್ಷಕ ವಿಡಿಯೋಗಳು ಜನರ ಮನಸೂರೆಗೊಳ್ಳುತ್ತಲೇ ಇರುತ್ತವೆ.

ಈ ಬಾರಿ ಪಂಜಾಬಿ ಇಂಡಸ್ಟ್ರಿ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದಢೂತಿ ಮಹಿಳೆಯು ಸೀರೆಯಲ್ಲಿ ಫೋಟೋ ಶೂಟ್‌ ಮಾಡಿಸಲು ಹೋಗಿ, ಸೀದಾ ನದಿಗೆ ಬಿದ್ದ ವಿಡಿಯೋ ವೈರಲ್‌ ಆಗಿದೆ.

ಗುಲಾಬಿ ಸೀರೆ ತೊಟ್ಟ ಮಹಿಳೆಯು, ನದಿಯೊಂದರ ಮೇಲೆ ಜೋಕಾಲಿಯಲ್ಲಿ ಜೀಕುತ್ತಿರುವಂತೆ ಆಕರ್ಷಕ ಫೋಟೊಶೂಟ್‌ ಮಾಡಿಸಲು ಮುಂದಾಗಿದ್ದಾರೆ. ಕ್ರೇನ್‌ ಮೂಲಕ ಜೋಕಾಲಿಯನ್ನು ಕೂಡ ಬಿಗಿದುಕೊಂಡು, ನದಿಯ ತೀರಕ್ಕೆ ತರಲಾಗಿದೆ. ಮೇಕಪ್‌ ಮಾಡಿಕೊಂಡು , ಜೋಕಾಲಿ ಏರಿದ ದಢೂತಿ ಮಹಿಳೆಯು ಜೋರಾಗಿ ಜೀಕುತ್ತಿದ್ದಾಗಲೇ ಜೋಕಾಲಿ ಉಲ್ಟಾ ಆಗಿದೆ. ಮಹಿಳೆ ಸೀದಾ ನದಿಗೆ ಬಿದ್ದಿದ್ದಾಳೆ.

ಸಚಿವ ಸುಧಾಕರ್ ಗೆ ಪ್ರಿಯಾಂಕ್ ಖರ್ಗೆ ಟಾಂಗ್: HM ಅಂದ್ರೆ ಹೋಮ್ ಮಿನಿಸ್ಟರ್ ಅನ್ನಬೇಕಾ? ಹೆಲ್ತ್ ಮಿನಿಸ್ಟರ್ ಅನ್ನಬೇಕಾ? ಎಂದು ಪ್ರಶ್ನೆ

ಮಜಾ ಎಂದರೆ ನದಿಗೆ ಬಿದ್ದ ಮಹಿಳೆಯು ತನ್ನ ಅವಸ್ಥೆ ಕಂಡು ತಾನೇ ಜೋರಾಗಿ ನಗಾಡುತ್ತಿದ್ದಾಳೆ. ಜೋಕಾಲಿ ತುಂಡರಿಸಿಯೇ ನದಿಗೆ ಆಕೆ ಬೀಳುವಂತೆ ಕಾಣುತ್ತದೆ ಎಂದು ವಿಡಿಯೊ ನೋಡಿದ ಕೆಲವರು ವಾದಿಸುತ್ತಿದ್ದಾರೆ ಕೂಡ. ಒಟ್ಟಿನಲ್ಲಿ ಮಹಿಳೆ ಸ್ಟಂಟ್‌ ಮಾಡಲು ಹೋಗಿ ನೀರುಪಾಲಾಗುವ ಮೂಲಕ ವಿಶ್ವವಿಖ್ಯಾತಿ ಆಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...