alex Certify ಕಿಕ್ ಮಾಡಲು ಹೋದ ಯುವತಿಯಿಂದ ಎಡವಟ್ಟು: ನಗು ತರಿಸುತ್ತೆ ಇದರ ವಿಡಿಯೋ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಕ್ ಮಾಡಲು ಹೋದ ಯುವತಿಯಿಂದ ಎಡವಟ್ಟು: ನಗು ತರಿಸುತ್ತೆ ಇದರ ವಿಡಿಯೋ​

ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಕ್ಲಬ್‌ಗಳು ಎಲ್ಲಾ ವಯೋಮಾನದ ಜನರನ್ನು ಸಂತಸದಲ್ಲಿ ತೇಲಿಸುವ ತಾಣ. ಇದರಲ್ಲಿರುವ ಆಟೋಟಗಳನ್ನು ಎಲ್ಲರೂ ಎನ್​ಜಾಯ್​ ಮಾಡುತ್ತಾರೆ. ಅದರಲ್ಲಿಯೂ ಸಾಹಸ ಆಟಗಳನ್ನು ಆಡಲು ಮತ್ತು ವಿವಿಧ ರೀತಿಯ ಸವಾರಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ.

ಇಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಆದರೆ ಈ ವಿಡಿಯೋ ವೈರಲ್​ ಆಗಲು ಕಾರಣ, ಸಾಹಸಮಯ ಆಟ ಆಡಲು ಹೋದ ಯುವತಿಯಿಂದ ಆಗಿರುವ ಎಡವಟ್ಟಿನಿಂದಾಗಿ ! ಹೌದು. ಬಾಕ್ಸಿಂಗ್​ ಮಾಡಲು ಹೋದ ಯುವತಿಯೊಬ್ಬಳು ಮಾಡಿದ ಎಡವಟ್ಟು ನೆಟ್ಟಿಗರುನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.

ಇದರ ವಿಡಿಯೋ ವೈರಲ್​ ಆಗಿದೆ. ಹುಡುಗಿಯೊಬ್ಬಳು ಸ್ಪೀಡ್ ಬ್ಯಾಗ್‌ಗೆ ಹೊಡೆಯಲು ಸಿದ್ಧಳಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಫುಲ್​ ಜೋಶ್​ನಿಂದ ಬ್ಯಾಗ್​ಗೆ ಹೊಡೆಯಲು ಈಕೆ ತಯಾರಿ ನಡೆಸಿದ್ದು, ನಂತರ ಹೊಡೆದಿದ್ದಾಳೆ ಕೂಡ. ಆದರೆ ದುರದೃಷ್ಟವಶಾತ್​ ಆಕೆ ಗುದ್ದಿದ್ದು ಬ್ಯಾಗ್​ಗೆ ಅಲ್ಲ ಬದಲಿಗೆ ಬ್ಯಾಗ್​ ಪಕ್ಕದಲ್ಲಿ ನಿಂತಿರೋ ತನ್ನ ಗೆಳೆಯನ ಮುಖಕ್ಕೆ! ಇದರ ವಿಡಿಯೋ ವೈರಲ್​ ಆಗಿದ್ದು, ಹಲವಾರು ರೀತಿಯ ತಮಾಷೆಯ ಕಮೆಂಟ್ಸ್​ ಬರುತ್ತಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...