alex Certify ‘ಡಾನ್ಸ್ ಮೇರಿ ರಾಣಿ’ಗೆ ಯುವತಿ ಜೊತೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ ಶ್ವಾನ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡಾನ್ಸ್ ಮೇರಿ ರಾಣಿ’ಗೆ ಯುವತಿ ಜೊತೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ ಶ್ವಾನ…..!

ಬಾಲಿವುಡ್ ನಟಿ ನೋರಾ ಫತೇಹಿಯ ಡ್ಯಾನ್ಸ್ ಮೇರಿ ರಾಣಿ ಹಾಡಿನ ನೃತ್ಯವು ಬಹಳ ಪ್ರಸಿದ್ಧವಾಗಿದೆ. ಈ ಹಾಡಿಗೆ ಹಲವಾರು ಮಂದಿ ಕುಣಿದಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ಮುದ್ದು ಮುದ್ದಾಗಿದ್ದು, ಖಂಡಿತಾ ನಿಮ್ಮ ಮನಗೆಲ್ಲುತ್ತದೆ.

ಯುವತಿಯೊಬ್ಬಳು ಡ್ಯಾನ್ಸ್ ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಲು ಶುರು ಮಾಡಿದ್ರೆ, ಆಕೆಯ ಪ್ರೀತಿಯ ಶ್ವಾನ ಕೂಡ ಕುಣಿದಿದೆ. ತನ್ನ ಎರಡು ಕಾಲಿನ ಮೇಲೆ ನಿಂತಿಕೊಂಡು ನಾಯಿ ಹೆಜ್ಜೆ ಹಾಕುತ್ತಿರುವ ದೃಶ್ಯ ಎಂಥವರ ಮನಗೆಲ್ಲದೆ ಇರಲಾರದು. ಇಬ್ಬರೂ ಕೂಡ ಒಟ್ಟಿಗೆ ನೃತ್ಯ ಮಾಡಿದ್ದು ಹಲವರ ಮನಗೆದ್ದಿದೆ.

ಲಿಯೋ ಹೆಸರಿನ ನಾಯಿಗೆ ಮೀಸಲಾಗಿರುವ ಇನ್‌ಸ್ಟಾಗ್ರಾಮ್ ಪುಟದಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಸದ್ಯ, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಕೇಕ್ ನಂತೆ ಸೇಲ್ ಆಗುತ್ತಿದ್ದು, ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ. ಜೊತೆಗೆ 87,000ಕ್ಕೂ ಹೆಚ್ಚು ಲೈಕ್ಸ್ ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ನಾಯಿಯ ನೃತ್ಯದ ಚಲನೆಗೆ ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...