alex Certify ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹದಿಹರೆಯ ಸಮೀಪಿಸುತ್ತಿರುವ ಹೆಣ್ಣು ಮಕ್ಕಳು ತಾಯಿ ಸುಪರ್ದಿಯಲ್ಲಿರುವುದು ಸೂಕ್ತ: ಕೌಟುಂಬಿಕ ಕೋರ್ಟ್ ಮಹತ್ವದ ಅಭಿಮತ

ಋತುಮತಿಯರಾಗುವ ವೇಳೆ ಹೆಣ್ಣುಮಕ್ಕಳು ತಮ್ಮ ತಾಯಂದಿರ ಸುಪರ್ದಿಯಲ್ಲಿರುವುದೇ ಉತ್ತಮ ಎಂದು ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯವೊಂದು ಸೂಚಿಸಿದೆ. 10 ವರ್ಷದ ಬಾಲಕಿಯೊಬ್ಬಳನ್ನು ಆಕೆಯ ತಾಯಿಯ ಸುಪರ್ದಿಗೆ ವಹಿಸಿದ ಕೋರ್ಟ್, ಈ ಹಂತದಲ್ಲಿ ಹೆಣ್ಣುಮಕ್ಕಳಿಗೆ ಬೇಕಾಗುವ ಭಾವನಾತ್ಮಕ ಬೆಂಬಲವನ್ನು ತಾಯಿ ಮಾತ್ರವೇ ನೀಡಬಲ್ಲಳು ಎಂಬುದು ಕೋರ್ಟ್‌ನ ತೀರ್ಮಾನವಾಗಿದೆ.

ವಿಚ್ಛೇದನ ಪ್ರಕರಣವೊಂದರ ಆಲಿಕೆ ನಡೆಸುತ್ತಿದ್ದ ನ್ಯಾಯಾಧೀಶೆ ಪ್ರವೀಣಾ ವ್ಯಾಸ್, ಈ ಸಂಬಂಧ ಏಪ್ರಿಲ್ 25ರಂದು ಆದೇಶವೊಂದನ್ನು ಹೊರಡಿಸಿದ್ದಾರೆ. ಹೆಣ್ಣುಮಗುವಿನ ಸರ್ವತೋಮುಖ ಅಭಿವೃದ್ಧಿ ಹಾಗೂ ಭಾವನಾತ್ಮಕ ನೆರವಿಗೆ ಆಕೆ ತನ್ನ ತಾಯಿಯೊಂದಿಗೆ ಇರುವುದೇ ಸೂಕ್ತ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಈ ಬಾಲಕಿಯ ಹೆತ್ತವರಿಬ್ಬರೂ ಸರ್ಕಾರೀ ಗೆಜ಼ೆಟೆಡ್ ಅಧಿಕಾರಿಗಳಾಗಿದ್ದು, 2021ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಈ ಜೋಡಿ ಬೇರ್ಪಟ್ಟ ಬಳಿಕ ಬಾಲಕಿ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. 2019ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಬಾಲಕಿಯ ತಾಯಿ, ತನ್ನ ಮಗಳು ನಿರ್ಣಾಯಕ ವಯಸ್ಸನ್ನು ತಲುಪುತ್ತಿದ್ದ ಕಾರಣ ಆ ವಯಸ್ಸಿನಲ್ಲಿ ಆಕೆಗೆ ಬೇಕಾದ ಆರೈಕೆ ಹಾಗೂ ರಕ್ಷಣೆಗಳನ್ನು ತಾಯಿ ಮಾತ್ರವೇ ಮಾಡಬಲ್ಲಳು ಎಂದು ಕೋರಿ ಮಗಳನ್ನು ತನ್ನ ಸುಪರ್ದಿಗೆ ಕೊಡುವಂತೆ ಅರ್ಜಿ ಸಲ್ಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...