alex Certify ಜಗಮಗಿಸಲಿದೆ ಮುಂಬೈನ ಗಿರ್ಗಾಂವ್ ಚೌಪಾಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗಮಗಿಸಲಿದೆ ಮುಂಬೈನ ಗಿರ್ಗಾಂವ್ ಚೌಪಾಟಿ

ಮುಂಬೈನ ಗಿರ್ಗಾಂವ್ ಚೌಪಾಟಿಯಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಮತ್ತಷ್ಟು ಸುಂದರವಾಗಿ ಕಾಣಲಿದೆ. ಇಲ್ಲಿ ಪ್ರವಾಸಿಗರು ಶೀಘ್ರದಲ್ಲೇ ಲೇಸರ್ ಶೋಗಳನ್ನು ಆನಂದಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ನೀರಿನ ಪರದೆಯನ್ನೂ ಅಳವಡಿಸಲಾಗುವುದು. ಇದಕ್ಕಾಗಿ ಬಿಎಂಸಿ ಸುಮಾರು 2.5 ಕೋಟಿ ರೂ.ಗಳನ್ನು ಅಂದಾಜಿಸಿದ್ದು ಟೆಂಡರ್ ಆಹ್ವಾನಿಸಿದೆ.

ಬಿಎಂಸಿ ‘ಮುಂಬೈ ಸುಂದರೀಕರಣ ಕಾರ್ಯಕ್ರಮ’ವನ್ನು ಕೈಗೊಂಡಿದೆ. ಈ ಕಾರ್ಯಕ್ರಮದಡಿಯಲ್ಲಿ, ನಗರದ ಫ್ಲೈಓವರ್‌ಗಳು, ಚೌಕಗಳು, ಟ್ರಾಫಿಕ್ ಐಲ್ಯಾಂಡ್‌ಗಳು ಮತ್ತು ಬೀಚ್‌ಗಳನ್ನು ದೀಪಾಲಂಕಾರ ಮಾಡಲಾಗುವುದು ಮತ್ತು ರಸ್ತೆಗಳು ಮತ್ತು ವಿಭಜಕಗಳನ್ನು ದುರಸ್ತಿ ಮಾಡಿ ಬಣ್ಣ ಬಳಿಯಲಾಗುತ್ತದೆ.

ನಗರದ ಪ್ರಮುಖ ರಸ್ತೆಗಳಲ್ಲೂ ವಾಲ್ ಪೇಂಟಿಂಗ್ ಮಾಡಲಾಗುವುದು. ಮುಂಬೈನಲ್ಲೂ ಸಾವಿರಾರು ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಬಾಂದ್ರಾ, ಮಾಹಿಮ್, ಸೆವಾರಿ ಮತ್ತು ಸಿಯಾನ್ ಕೋಟೆಯನ್ನು ಬೆಳಗಿಸಲಾಗುತ್ತದೆ. ಮುಂಬೈನ 850 ಉದ್ಯಾನಗಳನ್ನು ದುರಸ್ತಿ ಮತ್ತು ನಿರ್ವಹಣೆ ಮಾಡಲಾಗುವುದು. ಈ ಯೋಜನೆಗಾಗಿ BMC ಸುಮಾರು 1705 ಕೋಟಿ ರೂ. ವೆಚ್ಚ ಮಾಡಲಿದೆ.

ಸಿಂಗಾಪುರ ಮತ್ತು ಬ್ಯಾಂಕಾಕ್‌ನಲ್ಲಿರುವಂತೆ ಗಿರ್ಗಾಂಗಾಂವ್ ಚೌಪಾಟಿಯಲ್ಲಿ ಲೇಸರ್ ಶೋ ಮಾಡಲಾಗುವುದು. BMC ಈಗಾಗಲೇ ಗಿರ್ಗಾಂವ್ ಚೌಪಾಟಿಯಲ್ಲಿ ವೀಕ್ಷಣಾ ಡೆಕ್ ಅನ್ನು ನಿರ್ಮಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...