alex Certify ಗೊಂದಲಕ್ಕೆ ಕಾರಣವಾಗಿದೆ ಮಳೆಕಾಡಿನಲ್ಲಿ ಪತ್ತೆಯಾದ ವಿಮಾನದ ಘೋಸ್ಟ್​ ಇಮೇಜ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊಂದಲಕ್ಕೆ ಕಾರಣವಾಗಿದೆ ಮಳೆಕಾಡಿನಲ್ಲಿ ಪತ್ತೆಯಾದ ವಿಮಾನದ ಘೋಸ್ಟ್​ ಇಮೇಜ್​…!

ವಿಮಾನಗಳು ಯಾವುದೂ ಕಾಣೆಯಾಗಿಲ್ಲ, ಆದರೆ ಕಾಡಿನ ನಡುವೆ ವಿಮಾನದಂತೆ ಕಾಣಿಸುವ ಚಿತ್ರವೊಂದು ವೈರಲ್​ ಆಗಿದ್ದು, ಈ ಚಿತ್ರ ಸಾಕಷ್ಟು ಚರ್ಚೆಗೆ ಕಾರಣವಾದ್ದರಿಂದ ಸರ್ಕಾರಿ ಸಂಸ್ಥೆಗಳು ಪ್ರತಿಕ್ರಿಯೆ ನೀಡಿದ ಪ್ರಸಂಗ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಜಾಲತಾಣದಲ್ಲಿ ಕಾಣಿಸುವ ಚಿತ್ರವು ಆಸ್ಟ್ರೇಲಿಯಾದ ಮಳೆಕಾಡಿನಲ್ಲಿ ಪತನಗೊಂಡ ಪ್ರಯಾಣಿಕ ವಿಮಾನದಂತೆ ತೋರುತ್ತದೆ.

ಇದು ಟೌನ್ಸ್​ವಿಲ್ಲೆ ನಡುವಿನ ಕರಾವಳಿಯ ಸಮೀಪವಿರುವ ಕಾರ್ಡ್​ವೆಲ್​ ಶ್ರೇಣಿಯಲ್ಲಿನ ಮರಗಳ ನಡುವೆ ವಿಮಾನ ನಿಂತಿರುವಂತೆ ಕಾಣಿಸುತ್ತದೆ. ಫೋಟೋದಲ್ಲಿ ವಿಮಾನವು ಯಾವುದೇ ಹಾನಿಯ ಲಕ್ಷಣವನ್ನು ತೋರಿಸುವುದಿಲ್ಲ ಎಂದು ಹೇಳಬಹುದು

ಆಸ್ಟ್ರೇಲಿಯನ್​ ಟ್ರಾನ್ಸ್​ಪೋರ್ಟ್​ ಸೇಫ್ಟಿ ಬ್ಯೂರೋ ಈ ವಿಷಯದ ಬಗ್ಗೆ ಸ್ಪಷ್ಟಿಕರಣ ನೀಡಿ, ಈ ಸ್ಥಳದ ಸಮೀಪದಲ್ಲಿ ಯಾವುದೇ ಪ್ರಯಾಣಿಕರ ವಿಮಾನವು ಕಾಣೆಯಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದೆ.

ಇದು ಗೂಗಲ್​ ಸಾಫ್ಟ್‌ವೇರ್​ನಲ್ಲಿನ ದೋಷದ ಪರಿಣಾಮವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದು, ಈ ಘೋಸ್ಟ್​ ಚಿತ್ರದಲ್ಲಿ ಏನು ಇರಬಹುದು ಎಂಬ ಚರ್ಚೆ ನಡೆದಿದ್ದು, ನಾಗರಿಕ ವಿಮಾನಯಾನ ಸುರಕ್ಷತಾ ಪ್ರಾಧಿಕಾರ ಕೂಡ ಅಧಿಕೃತ ಹೇಳಿಕೆಯಲ್ಲಿ ಅಭಿಪ್ರಾಯ ತಿಳಿಸಿದೆ.

https://twitter.com/GujjarPrideof/status/1561601791846141953?ref_src=twsrc%5Etfw%7Ctwcamp%5Etweetembed%7Ctwterm%5E1561601791846141953%7Ctwgr%5E5cae805c8dde64527407aad315fc44f9d115ee32%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fghost-image-of-passenger-aircraft-spotted-in-australian-rainforest-is-just-bizarre-5804077.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...