ಕೋವಿಡ್-19 ಸೊಂಕಿಗೆ ಚಿಕಿತ್ಸೆ ಪಡೆಯಲು ಆರ್ಥಿಕ ನೆರವು ನೀಡಲು ಮುಂದಾಗಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ನಿಯಮಿತ (ಕೆಎಂಬಿಎಲ್) ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ತುರ್ತು ವೈಯಕ್ತಿಕ ಸಾಲ ನೀಡಲು ಮುಂದಾಗಿದೆ.
ಈ ಆಫರ್‌ನಲ್ಲಿ10% ವಾರ್ಷಿಕ ಬಡ್ಡಿ ದರದಲ್ಲಿ ಸಾಲ ನೀಡಲು ಕೋಟಕ್ ಬ್ಯಾಂಕ್ ಮುಂದಾಗಿದೆ. ಕೋವಿಡ್-19 ಸೋಂಕಿಗೆ ವೈಯಕ್ತಿಕ ಹಾಗೂ ಕುಟುಂಬಸ್ಥರ ಚಿಕಿತ್ಸೆಯ ವೆಚ್ಚವನ್ನು ಈ ಸಾಲ ಭರಿಸಲಿದೆ.
ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್ ಮಾಡಿದ ಆನಂದ್ ಮಹಿಂದ್ರಾ
ಸಾಲ ಮರುಪಾವತಿಗೆ ಒಂದರಿಂದ ನಾಲ್ಕು ವರ್ಷಗಳ ಅವಧಿ ಇದೆ. ಸಾಲದ ಮೊತ್ತದ 1%ರಷ್ಟನ್ನು ಪರಿಷ್ಕರಣಾ ಶುಲ್ಕವನ್ನಾಗಿ ಬ್ಯಾಂಕ್ ವಿಧಿಸಲಿದೆ.
ಇದೇ ವೇಳೆ, ಟಾಟಾ ಹಾಗೂ ಮೆಡಿಬಡ್ಡಿ ಜೊತೆಗೆ ಕೈಜೋಡಿಸಿರುವ ಕೋಟಕ್ ಮಹಿಂದ್ರಾ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ದಾರರಿಗೆ ಇನ್ನಷ್ಟು ಆಕರ್ಷಕ ಆರೋಗ್ಯ ಸೇವೆಗಳ ಆಫರ್‌ಗಳನ್ನು ಕೊಟ್ಟಿದೆ.