alex Certify ಕೇವಲ 87 ರೂಪಾಯಿಗೆ ಆಸ್ತಿ ಮಾರಾಟ ಮಾಡಿದ ರಾಜ ವಂಶಸ್ಥ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 87 ರೂಪಾಯಿಗೆ ಆಸ್ತಿ ಮಾರಾಟ ಮಾಡಿದ ರಾಜ ವಂಶಸ್ಥ….!

ಮೊನಾಕೋ ರಾಜಕುಮಾರಿ ಕ್ಯಾರೋಲಿನ್​ ಪತಿ ಹ್ಯಾನೋವರ್​ ಪ್ರಿನ್ಸ್​ ಅರ್ನ್ಸ್ಟ್​ ಅಗಸ್ಟ್, ಕೋಟೆ ಸಾರ್ವಜನಿಕರ ಸ್ವತ್ತಾಗದಂತೆ ಮಾಡುವ ಸಲುವಾಗಿ ತನ್ನ ಮಗನಿಂದ ಆಸ್ತಿಯನ್ನ ಹಿಂಪಡೆಯಲು ಮೊಕದ್ದಮೆ ಹೂಡಿದ್ದಾರೆ ಎಂದು ನ್ಯಾಯಾಲಯ ಮಾಹಿತಿ ನೀಡಿದೆ.

66 ವರ್ಷದ ಅರ್ನ್ಸ್ಟ್​ ಅಗಸ್ಟ್​ ತನ್ನ ಮಗನಿಗೆ 2004 ಹಾಗೂ 2007ರ ಅವಧಿಯಲ್ಲಿ ಮೆರಿಯನ್​ಬರ್ಗ್​ ಕೋಟೆ ಸೇರಿದಂತೆ ವಿವಿಧ ಆಸ್ತಿಗಳನ್ನ ನೀಡಿದ್ದರು. ಆದರೆ ಮಿಲಿಯನ್​ಗಟ್ಟಲೇ ಮೌಲ್ಯ ಹೊಂದಿರುವ ಈ ಆಸ್ತಿಯನ್ನ ಆಗಸ್ಟ್​ ಪುತ್ರ ಸರ್ಕಾರಕ್ಕೆ ಕೇವಲ 1 ಯುರೋ ಅಂದ್ರೆ ಅಂದ್ರೆ ಸರಿ ಸುಮಾರು 87 ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ತನ್ನ ಪುತ್ರ ಕುಟುಂಬ ವಿರೋಧಿ ಕಾರ್ಯ ಮಾಡಿದ್ದಾರೆ ಹಾಗೂ ನಮ್ಮ ಕುಟುಂಬದ ಸ್ವತ್ತನ್ನ ಸಾರ್ವಜನಿಕ ಆಸ್ತಿಯನ್ನಾಗಿ ಮಾಡುವ ಮೂಲಕ ದ್ರೋಹ ಎಸಗಿದ್ದಾರೆ ಎಂದು ಪ್ರಿನ್ಸ್​ ಅರ್ನ್ಸ್ಟ್ ಅಗಸ್ಟ್ ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...