alex Certify ಒಂದೇ ಕುಟುಂಬದ 500 ಸದಸ್ಯರ ʼಅಪೂರ್ವ ಸಂಗಮʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕುಟುಂಬದ 500 ಸದಸ್ಯರ ʼಅಪೂರ್ವ ಸಂಗಮʼ

ಅವಿಭಕ್ತ ಕುಟುಂಬಗಳ ಮೌಲ್ಯದ ಬಗ್ಗೆ ಅರಿವು ಮೂಡಿಸಲು 10 ವರ್ಷಗಳ ಅಭಿಯಾನದಲ್ಲಿ ಐದು ತಲೆಮಾರುಗಳು ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯಲ್ಲಿ ಒಟ್ಟುಗೂಡಿದ್ದು, ಈ ಕುಟುಂಬ ಮಿಲನದಲ್ಲಿ ಮುತ್ತಜ್ಜನಿಂದ ಹಿಡಿದು ಮೊಮ್ಮಕ್ಕಳವರೆಗೆ ಸಂಭ್ರಮ ಹಾಡು ಕುಣಿತ ಒಳಗೊಂಡಿತ್ತು.

ನಗರೀಕರಣವು ಕುಟುಂಬ ರಚನೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಏಳು ತಲೆಮಾರುಗಳ ಹಿಂದೆ ಒಂದೇ ಕುಟುಂಬದಲ್ಲಿ ಜನಿಸಿದ ಅನೇಕರು ಬೇರ್ಪಟ್ಟು ವಿವಿಧ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದರು. ಆದರೆ, ಇತ್ತೀಚೆಗೆ ನಡೆದ ಕಾರ್ಯಕ್ರಮಮೊಂದರಲ್ಲಿ ಐದು ತಲೆಮಾರಿನ ಕುಟುಂಬ ಒಟ್ಟಿಗೆ ಭೇಟಿಯಾಗಿ ಅವಿಭಕ್ತ ಕುಟುಂಬಗಳ ಸಂಪ್ರದಾಯವನ್ನು ಎತ್ತಿ ಹಿಡಿಯಿತು.

1850ರಿಂದ ಮೈಲಾಡುತುರೈ ಜಿಲ್ಲೆಯ ಉಲುತ್ತುಕುಪೈನಲ್ಲಿ ಮೊದಲ ತಲೆಮಾರಿನ ನಿವಾಸಿಯಾಗಿದ್ದ ವಿಶ್ವಲಿಂಗಂ ಅವರು ರಾಮಸ್ವಾಮಿ ಅವರ ತಂದೆ. ಅವರು ಕೀಜಪೆರುಂಪಲ್ಲಂ ಗ್ರಾಮಕ್ಕೆ ಸ್ಥಳಾಂತರಗೊಂಡರು, ಅಲ್ಲಿ ಅವರು ಕಿರಾಣಿ ಅಂಗಡಿಯನ್ನು ನಿರ್ವಹಿಸುತ್ತಿದ್ದರು. ಕನ್ನಿಯಗುಡಿಯ ಮೀನಾಕ್ಷಿಯನ್ನು ವಿವಾಹವಾದ ನಂತರ ಮಿರಾಸುದರ್​ ಸ್ಥಾನವನ್ನು ಪಡೆದರು. ದಿವಂಗತ ರಾಮಸ್ವಾಮಿ-ಮೀನಾಕ್ಷಿ ದಂಪತಿಯ ಎರಡನೇ ತಲೆಮಾರಿನ ಐದು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿಯೊಂದಿಗೆ ಪ್ರಾರಂಭವಾದ ಅವರ ಕುಟುಂಬವು ಪ್ರಸ್ತುತ ಏಳನೇ ತಲೆಮಾರಿನಲ್ಲಿದೆ.

ಅನೇಕರು ಭೂಮಾಲೀಕರು, ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ವ್ಯಾಪಾರಸ್ಥರಾಗಿ ವಿದೇಶಕ್ಕೆ ಹೋಗಿದ್ದಾರೆ, 450 ಕ್ಕೂ ಹೆಚ್ಚು ಜನರು ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬಂಧು ಮಿತ್ರರೊಂದಿಗೆ ಸಂಪರ್ಕ ಸಾಧಿಸಿ ಸಾಮೂಹಿಕವಾಗಿ ಅವಿಭಕ್ತ ಕುಟುಂಬಗಳ ಮೌಲ್ಯವನ್ನು ಅರಿತುಕೊಂಡಿದ್ದಾರೆ.

ರಾಮಸ್ವಾಮಿ – ಮೀನಾಕ್ಷಿ ಕುಟುಂಬ ಸಂಗಮ ಸಮಾರಂಭವು ಮೈಲಾಡುತುರೈನ ಖಾಸಗಿ ಮದುವೆ ಮಂಟಪದಲ್ಲಿ ನಡೆಯಿತು. ಅಜ್ಜಿಯರು, ಅಜ್ಜಂದಿರು, ಪುತ್ರರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳು- ಐದು ತಲೆಮಾರುಗಳ 27 ಕುಟುಂಬಗಳನ್ನು ಪ್ರತಿನಿಧಿಸುವ ತಮ್ಮ ಸಂಬಂಧಿಕರೊಂದಿಗೆ ಒಂದೇ ಸ್ಥಳದಲ್ಲಿ ಭೇಟಿಯಾದರು. ಈ ಮೂಲಕ ಹಿರಿಯ ತಲೆಮಾರುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಿದ್ದು, ಅವರ ಕುಟುಂಬ ವೃಕ್ಷದ ಫೋಟೋ ತೆಗೆಸಿಕೊಂಡಿದ್ದಾರೆ.

ಸಮಾರಂಭದಲ್ಲಿ ಎಲ್ಲರೂ ಡ್ಯಾನ್ಸ್​, ಹಾಡು, ಕ್ರೀಡಾ ಕಾರ್ಯಕ್ರಮಗಳಿಂದ ಖುಷಿಪಟ್ಟರು. ಹಲವರು ಸೆಲ್ಫಿ ತೆಗೆದುಕೊಂಡರು, ಆತ್ಮೀಯವಾಗಿ ಮಾತನಾಡಿ ಮತ್ತು ಹಿರಿಯರ ಆಶೀರ್ವಾದ ಪಡೆದರು. ಇದೇ ವೇಳೆ ಕುಟುಂಬವು ತಮ್ಮ ಪೂರ್ವಜರ ಮನೆಯ ಚಿತ್ರಗಳನ್ನು ಒಳಗೊಂಡಿರುವ ವಿಡಿಯೊ ತುಣುಕನ್ನು ನೋಡಿ ಆನಂದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...