alex Certify ಸಲ್ಮಾನ್ ಖಾನ್ ಜೊತೆ ಜೆನಿಲಿಯಾ ಡಿಸೋಜಾ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಖಾನ್ ಜೊತೆ ಜೆನಿಲಿಯಾ ಡಿಸೋಜಾ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಜೆನಿಲಿಯಾ ಡಿಸೋಜಾ ಹಾಗೂ ಸಲ್ಮಾನ್ ಖಾನ್ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಹಾಡಿಗೆ ಸಖತ್ ಆಗಿ ಕುಣಿದು, ಎಂಜಾಯ್ ಮಾಡಿದ್ದಾರೆ. ತಾವಿಬ್ಬರೂ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಲ್ಮಾನ್ ಖಾನ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಲ್ಮಾನ್ ಖಾನ್ ಅವರು ಸೋಮವಾರ ತಮ್ಮ ಕುಟುಂಬದೊಂದಿಗೆ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ವಿಷಕಾರಿಯಲ್ಲದ ಹಾವು ಕಚ್ಚಿದ ಎರಡು ದಿನಗಳ ನಂತರ ಸಲ್ಮಾನ್ ಖಾನ್ ಅವರಿಗೆ ಜೆನಿಲಿಯಾ ಶುಭ ಕೋರುವ ಮುಖಾತರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆನ್ನಿ ಲಾಗಿನ್ಸ್ ಅವರ ಟ್ರ್ಯಾಕ್ ಫೂಟ್‌ಲೂಸ್‌ಗೆ ನೃತ್ಯ ಮಾಡಿದ್ದಾರೆ. ನೃತ್ಯದ ವೇಳೆ ಇಬ್ಬರೂ ಕೆಂಪು ಟೀ ಶರ್ಟ್‌ಗಳನ್ನು ಧರಿಸಿದ್ದಾರೆ. ದೇವರು ನಿಮಗೆ ಸಂತೋಷ, ಪ್ರೀತಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ. ಜನ್ಮದಿನದ ಶುಭಾಶಯಗಳು ಎಂದು ಜೆನಿಲಿಯಾ ಶೀರ್ಷಿಕೆ ನೀಡಿದ್ದಾರೆ.

ಸೋಮವಾರ ವಿಡಿಯೋ ಹಂಚಿಕೊಂಡ ಬಳಿಕ ಜೆನಿಲಿಯಾ ಮತ್ತು ಸಲ್ಮಾನ್ ಖಾನ್ ನೃತ್ಯ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ಶನಿವಾರ ರಾತ್ರಿ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಖಾನ್ ಅವರಿಗೆ ವಿಷರಹಿತ ಹಾವು ಕಚ್ಚಿತ್ತು. ಅವರನ್ನು ನವಿ ಮುಂಬೈನ ಕಾಮೋಥೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಗಿತ್ತು. ಭಾನುವಾರ ಬೆಳಿಗ್ಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...