alex Certify ಮಗನ ಹೆಸರನ್ನು ರಿವೀಲ್​ ಮಾಡಿದ ಹರ್ಭಜನ್​ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಹೆಸರನ್ನು ರಿವೀಲ್​ ಮಾಡಿದ ಹರ್ಭಜನ್​ ಪತ್ನಿ

ಬಾಲಿವುಡ್​ ನಟಿ ಹಾಗೂ ಕ್ರಿಕೆಟಿಗ ಹರ್ಭಜನ್​ ಸಿಂಗ್​​ ಪತ್ನಿ ಗೀತಾ ಬಸ್ರಾ ತಮ್ಮ ಮಗನ ಹೆಸರನ್ನ ಸೋಶಿಯಲ್​ ಮೀಡಿಯಾದಲ್ಲಿ ರಿವೀಲ್​ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಮ್ಮ ಪುತ್ರಿ ಹಿನಾಯಾ ಹೀರ್​ ಪ್ಲಾಹಾ ಜೊತೆಗೆ ಪುತ್ರನ ಫೋಟೋವನ್ನ ಶೇರ್​ ಮಾಡಿರುವ ನಟಿ ಗೀತಾ ತಮ್ಮ ಪುತ್ರನಿಗೆ ಜೋವನ್​​ ಸಿಂಗ್​ ಪ್ಲಾಹಾ ಎಂದು ನಾಮಕಾರಣ ಮಾಡಿರೋದಾಗಿ ಹೇಳಿದ್ದಾರೆ. ಜುಲೈ 10ರಂದು ಗೀತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಜೋವನ್​ ಸ್ಲಾವಿಕ್​ ಭಾಷೆಯ ಮೂಲವನ್ನ ಹೊಂದಿದ್ದು ಇದರ ಅರ್ಥ ದೇವರ ಕೃಪೆ ಎಂದಾಗಿದೆ. ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾಗಿರುವ ಫೋಟೋದಲ್ಲಿ ಹಿನಾಯಾ ತನ್ನ ಮಡಿಲಿನಲ್ಲಿ ತಮ್ಮನನ್ನ ಎತ್ತಿಕೊಂಡು ಹಣೆಗೆ ಮುತ್ತಿಕ್ಕುತ್ತಿದ್ದಾಳೆ.

ಈ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ನಟಿ, ಜೋವಾನ್​ ವೀರ್​ ಸಿಂಗ್​ ಪ್ಲಾಹಾರನ್ನ ಪರಿಚಯಿಸುತ್ತಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಗೀತಾ ಹಾಗೂ ಹರ್ಭಜನ್​ ಸಿಂಗ್​​ 2015ರ ಅಕ್ಟೋಬರ್​ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲ ಪುತ್ರಿ ಹಿನಾಯಾ ಜುಲೈ 2016ರ ಜುಲೈನಲ್ಲಿ ಜನಿಸಿದ್ದಳು.

View this post on Instagram

A post shared by Geeta Basra (@geetabasra)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...