alex Certify ‘ಗರ್ವದಿಂದ ಹೇಳು ನಾನು ಹಿಂದೂ ಎಂದು’: ‘ಆಕಸ್ಮಿಕ ಹಿಂದೂ’ ರಾಹುಲ್ ಗಾಂಧಿ; ಯೋಗಿ ಆದಿತ್ಯನಾಥ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗರ್ವದಿಂದ ಹೇಳು ನಾನು ಹಿಂದೂ ಎಂದು’: ‘ಆಕಸ್ಮಿಕ ಹಿಂದೂ’ ರಾಹುಲ್ ಗಾಂಧಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

ಅಮೇಥಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರ ಮುಸುಕಿನ ‘ಹಿಂದೂಯಿಸಂ ವರ್ಸಸ್ ಹಿಂದುತ್ವ’ ಹೇಳಿಕೆ ಕಟುವಾಗಿ ಟೀಕಿಸಿದ ಯೋಗಿ, ಹಿಂದೂ ಎಂದು ಹೆಮ್ಮೆಪಡಬೇಕೆಂದು ಬೆಂಬಲಿಗರಿಗೆ ಹೇಳಿದ್ದಾರೆ. ‘ನಾವು ಭಾರತೀಯರು ಮತ್ತು ಹಿಂದೂಗಳು. ನಮ್ಮ ಸಾಂಸ್ಕೃತಿಕ ಗುರುತು ಅದೇ. ನಾನೊಬ್ಬ ಹೆಮ್ಮೆಯ ಹಿಂದೂ ಎಂದು ಘೋಷಿಸಲು ಯಾವುದೇ ಹಿಂಜರಿಕೆ ಇಲ್ಲ. ನಾವು ಹಿಂದೂಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ಭಾರೀ ಹರ್ಷೋದ್ಗಾರದ ನಡುವೆ ಹೇಳಿದ್ದಾರೆ.

ಅಮೇಥಿ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು 2019 ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತರು.

ಹಿಂದೂ ಧರ್ಮದ ಅರ್ಥವು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜನೆಯಾಗುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದು, ಇದು ನಮ್ಮ ಸಾಂಸ್ಕೃತಿಕ ಗುರುತು, ಈ ಜನರು(ಕಾಂಗ್ರೆಸ್‌) ಗುರುತಿಸಲು ಪ್ರಯತ್ನಿಸಿದ್ದರೆ 1947 ರಲ್ಲಿ ಭಾರತ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ದುರಾಸೆ ಮತ್ತು ಅಧಿಕಾರದ ಲಾಲಸೆ ದೇಶವನ್ನು, ದೇಶದ ದೇಶದ ವೈಭವವನ್ನು ಹಾಳು ಮಾಡಿದೆ. ದೇಶದ ಹಿಂದೂಗಳನ್ನು ಬಂಧಿಸಲು ಅವರು(ಕಾಂಗ್ರೆಸ್) ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಜಾರಿಗೊಳಿಸಲು ಒತ್ತಾಯಿಸಿದ್ದರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ನಿಲ್ಲಿಸಿದರು, ರಾಮಸೇತು ಧ್ವಂಸಕ್ಕೆ ಲಾಬಿ ಮಾಡಿದರು, ಕೋಮು ವಿರೋಧಿ ಕಾನೂನನ್ನು ಸಹ ತಂದರು. ಚುನಾವಣಾ ಕಾಲ ಹೊರತುಪಡಿಸಿ, ಅವರು ತಮ್ಮನ್ನು ತಾವು ಹಿಂದೂಗಳೆಂದು ಗುರುತಿಸಿಕೊಳ್ಳಲು ಅವರು ಯಾವಾಗಲೂ ಹಿಂದೂ ನಂಬಿಕೆಗಳೊಂದಿಗೆ ಆಟವಾಡುತ್ತಾರೆ ಎಂದು ಯೋಗಿ ಟೀಕಿಸಿದ್ದಾರೆ.

ಗಾಂಧಿ ವಂಶಸ್ಥರ ಮೇಲೆ ದಾಳಿ ಮುಂದುವರೆಸಿದ ಉತ್ತರ ಪ್ರದೇಶ ಸಿಎಂ, ಅವರನ್ನು ‘ಆಕಸ್ಮಿಕ ಹಿಂದೂ’ ಎಂದು ಕರೆದರು. ದೇವಸ್ಥಾನದಲ್ಲಿ ಕೂರುವುದೂ ಗೊತ್ತಿಲ್ಲದ ರಾಹುಲ್ ಗಾಂಧಿ ‘ಚುನಾವಣಾ ಪ್ರವಾಸಿ’ ಎಂದು ವ್ಯಂಗ್ಯವಾಡಿದ್ದಾರೆ.

ಅಮೇಥಿಯ ಮಾಜಿ ಸಂಸದರಿಗೆ(ರಾಹುಲ್ ಗಾಂಧಿಯ) ದೇವಸ್ಥಾನದಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂದು ತಿಳಿದಿಲ್ಲ. 2017ರಲ್ಲಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಅಮೇಥಿಯ ಮಾಜಿ ಸಂಸದರು ಮಂದಿರವೊಂದಕ್ಕೆ ತೆರಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ್ದರು. ಅವರು ಭೇಟಿ ನೀಡಿದ ದೇವಸ್ಥಾನದ ಅರ್ಚಕರು ಅವರಿಗೆ ಕುಳಿತುಕೊಳ್ಳುವುದು ಹೇಗೆಂದು ಹೇಳಿಕೊಡಬೇಕಿತ್ತು. ಕಾಲು ಮಡಚಿ ಕುಳಿತುಕೊಳ್ಳುವಂತೆ ಹೇಳಿದಾಗ ಮಾಜಿ ಸಂಸದರು ಹೇಗೆ ಕುಳಿತುಕೊಳ್ಳಬೇಕು ಎಂಬ ಅರಿವಿಲ್ಲ ಎಂದು ಉತ್ತರಿಸಿದರು. ಅವರು ಭೇಟಿ ನೀಡಿದ್ದು ಮಸೀದಿಗೆ ಅಲ್ಲ, ಮಂದಿರಕ್ಕೆ ಎಂದು ಅವರಿಗೆ ನೆನಪಿಸಬೇಕಾಗಿತ್ತು. ಕನಿಷ್ಠ ಹಿಂದೂ ಧರ್ಮ ಮತ್ತು ಹಿಂದುತ್ವದ ಬಗ್ಗೆ ಬೋಧಿಸುವ ಮೊದಲು ಮೂಲಭೂತ ಅಂಶಗಳನ್ನು ಕಲಿಯಿರಿ ಎಂದು ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದಾರೆ.

ಆಚಾರಗಳ ಬಗ್ಗೆ ಮೂಲಭೂತ ತಿಳಿವಳಿಕೆ ಇಲ್ಲದಿರುವವರು ಹಿಂದುತ್ವ ಮತ್ತು ಹಿಂದುತ್ವದ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲು ಪ್ರಾರಂಭಿಸಿದರೆ, ಅದನ್ನು ಬುದ್ಧಿವಂತಿಕೆಯ ಕೊರತೆ ಎಂದು ಅರ್ಥೈಸಬಹುದು ಎಂದು ಯೋಗಿ ಹೇಳಿದ್ದಾರೆ.

ವಿಭಜಕ ರಾಜಕಾರಣ, ವಿಘಟನೆ ಮತ್ತು ವಿಭಜನೆಯನ್ನು ಯಾವಾಗಲೂ ತಮ್ಮ ವಂಶವಾಹಿಗಳ ಭಾಗವಾಗಿ ಸ್ವೀಕರಿಸಿದವರು ಅವರಾಗಿದ್ದಾರೆ. ಅವರ ಪೂರ್ವಜರು ಆಕಸ್ಮಿಕವಾಗಿ ನಾವು ಹಿಂದೂಗಳು ಎಂದು ಘೋಷಿಸುತ್ತಾರೆ, ಅವರು ತಮ್ಮನ್ನು ತಾವು ಹಿಂದೂ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸಿಎಂ ಟೀಕಿಸಿದರು.

ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಲು ಪ್ರಯತ್ನಿಸಿದ ಕಾಂಗ್ರೆಸ್ ನಾಯಕರ ಇತ್ತೀಚಿನ ವಾಗ್ದಾಳಿಗಳ ನಂತರ ರಾಹುಲ್ ಗಾಂಧಿಯವರ ಮೇಲೆ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...