alex Certify ನಕ್ಸಲೈಟ್ ಆಗಬೇಕಾದವರು ಕಾವಿ ಧರಿಸಿದ್ದಾರೆ: ಗಣಪತಿ ಪೂಜೆ ಬಗ್ಗೆ ಸಾಣೆಹಳ್ಳಿ ಶ್ರೀ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕ್ಸಲೈಟ್ ಆಗಬೇಕಾದವರು ಕಾವಿ ಧರಿಸಿದ್ದಾರೆ: ಗಣಪತಿ ಪೂಜೆ ಬಗ್ಗೆ ಸಾಣೆಹಳ್ಳಿ ಶ್ರೀ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

ಚಾಮರಾಜನಗರ: ನಕ್ಸಲೈಟ್ ಆಗಬೇಕಾದವರು ಕಾವಿ ಧರಿಸಿದ್ದಾರೆ ಎಂದು ಗಣಪತಿ ಪೂಜೆಗೆ ಸಂಬಂಧಿಸಿದಂತೆ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕಮ್ಯುನಿಸ್ಟ್, ನಕ್ಸಲೆಟ್ ಆಗಬೇಕಾಗಿದ್ದವರು ಕಾವಿ ಹಾಕಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ಹಿಂದೂ ವಿರೋಧಿ ಹೇಳಿಕೆಗಳನ್ನು ಸ್ವಾಮೀಜಿ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಹಿಂದೂ ಸಂಸ್ಕೃತಿಯ ಆಧಾರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಬರುತ್ತೆ. ನಾವು ಗಣಪತಿ ಪೂಜೆ ಮಾಡಿಯೇ ಧಾರ್ಮಿಕ ಕಾರ್ಯಕ್ರಮ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವರ್ಷ ಒಬ್ಬ ಸ್ವಾಮೀಜಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು, ಮುಂದಿನ ವರ್ಷ ತಮಗೂ ಯಾವುದಾದರೂ ಪ್ರಶಸ್ತಿ ಸಿಗಲಿ ಎಂದು ಉಳಿದವರು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಪೇಮೆಂಟ್ ಸಾಹಿತಿಗಳು, ಸ್ವಾಮೀಜಿಗಳಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...