alex Certify BIG NEWS: ಬೆಂಗಳೂರಿನಲ್ಲಿ ಮರದ ಮೇಲೆ ಮಹಿಳೆಯ ತಲೆ ಬುರುಡೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನಲ್ಲಿ ಮರದ ಮೇಲೆ ಮಹಿಳೆಯ ತಲೆ ಬುರುಡೆ ಪತ್ತೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮರದ ಮೇಲೆ ಮಹಿಳೆಯೊಬ್ಬರ ತಲೆ ಬುರುಡೆ ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಬೆಂಗಳೂರಿನ ಅಕ್ಷಯ ನಗರದ ಹುಳಿಮಾವು ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಲೆಬುರುಡೆಯೊಂದು ಪತ್ತೆಯಾಗಿದ್ದು, ಕಳೆದ 6 ತಿಂಗಳಿಂದ ಕೊಳೆತುಹೋಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ನಡೆಸಿರುವ ಹುಳಿಮಾವು ಪೊಲೀಸರು ಇದು ಮಹಿಳೆಯ ತಲೆ ಬುರುಡೆ ಎಂಬುದನ್ನು ಪತ್ತೆ ಮಾಡಿದ್ದಾರೆ.

7 ತಿಂಗಳ ಹಿಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ನೇಪಾಳಿ ಮಹಿಳೆಯೊಬ್ಬರು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಅದೇ ಮಹಿಳೆಯ ತಲೆ ಬುರುಡೆ ಇದಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪತ್ತೆಯಾಗಿರುವ ತಲೆ ಬುರುಡೆ, ಅಸ್ಥಿಪಂಜರದ ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...