alex Certify ಅಮೆರಿಕದಲ್ಲಿ ವಿದೇಶಿ ಪ್ರಯಾಣ ನಿರ್ಬಂಧಗಳಲ್ಲಿ ಸಡಿಲಿಕೆ…..! ಕೋವ್ಯಾಕ್ಸಿನ್​ ಲಸಿಕೆ ಪಡೆದವರಿಗೆ ಶುರುವಾಯ್ತಾ ಹೊಸ ಸಂಕಷ್ಟ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ವಿದೇಶಿ ಪ್ರಯಾಣ ನಿರ್ಬಂಧಗಳಲ್ಲಿ ಸಡಿಲಿಕೆ…..! ಕೋವ್ಯಾಕ್ಸಿನ್​ ಲಸಿಕೆ ಪಡೆದವರಿಗೆ ಶುರುವಾಯ್ತಾ ಹೊಸ ಸಂಕಷ್ಟ…..?

ನವೆಂಬರ್​ ತಿಂಗಳಿನಿಂದ ಅಮೆರಿಕವು ಭಾರತ, ಚೀನಾ, ಬ್ರೆಜಿಲ್​ ಸೇರಿದಂತೆ ಒಟ್ಟು 33 ದೇಶದ ಪ್ರಜೆಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ಮುಕ್ತಿ ನೀಡಲಿದೆ.

ಆದರೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದ ಪ್ರಯಾಣಿಕರು ಮಾತ್ರ ಅಮೆರಿಕಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

18 ತಿಂಗಳುಗಳ ಹಿಂದೆ ಡೊನಾಲ್ಡ್​ ಟ್ರಂಪ್​ ಅಧಿಕಾರಾವಧಿಯಲ್ಲಿ ಹೇರಲಾಗಿದ್ದ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಜೋ ಬಿಡೆನ್ ಸರ್ಕಾರ ಸಡಿಲಗೊಳಿಸಿದೆ. ಕೋವಿಡ್ ಲಸಿಕೆಯನ್ನು ಪಡೆದ ಎಲ್ಲಾ ಪ್ರಯಾಣಿಕರಿಗೂ ಈ ಅಮೆರಿಕ ಪ್ರಯಾಣ ಸಾಧ್ಯವಾಗುವುದಿಲ್ಲ.

ಅಮೆರಿಕಕ್ಕೆ ಆಗಮಿಸುವ ವಿದೇಶಿ ಪ್ರಜೆಗಳು ಲಸಿಕೆ ಪ್ರಮಾಣ ಪತ್ರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಯಾವ ಲಸಿಕೆಗಳಿಗೆ ಅನುಮತಿ ನೀಡಬೇಕು ಎಂಬ ಅಂತಿಮ ನಿರ್ಧಾರವನ್ನು ಸೆಂಟರ್ಸ್​ ಫಾರ್​ ಡಿಸೀಸ್​ ಕಂಟ್ರೋಲ್​ & ಪ್ರಿವೆನ್ಶನ್​​ ಕೈಗೊಳ್ಳಲಿದೆ ಎಂದು ಶ್ವೇತ ಭವನ ಈಗಾಗಲೇ ಮಾಹಿತಿ ನೀಡಿದೆ.

ಭಾರತೀಯ ಕೊರೊನಾ ಲಸಿಕೆಗಳ ಕತೆಯೇನು..?
ಭಾರತ್​ ಬಯೋಟೆಕ್​ನಿಂದ ನಿರ್ಮಿತವಾದ ಕೋವ್ಯಾಕ್ಸಿನ್​ ತುರ್ತು ಬಳಕೆಗೆ ಎಫ್​ಡಿಎ ಅನುಮತಿ ನೀಡಿಲ್ಲ. ಅಮೆರಿಕದಲ್ಲಿ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿದ್ದ ಕೋವ್ಯಾಕ್ಸಿನ್​ ಮನವಿಯನ್ನು ಎಫ್​ಡಿಎ ತಿರಸ್ಕರಿಸಿತ್ತು. ಕೊವ್ಯಾಕ್ಸಿನ್ ಲಸಿಕೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಪ್ರಾಯೋಗಿಕ ಪರೀಕ್ಷೆಯ ಅಗತ್ಯವಿದೆ ಎಂದು ಎಫ್​ಡಿಎ ಹೇಳಿತ್ತು.

ಹೀಗಾಗಿ ಭಾರತದಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಸ್ವೀಕರಿಸಿದವರಿಗೆ ಇದೀಗ ಅಮೆರಿಕ ಪ್ರಯಾಣ ತುಸು ಕಷ್ಟವೇ ಆಗಿರಲಿದೆ. ಕೊವ್ಯಾಕ್ಸಿನ್​ ಲಸಿಕೆಯು ವಿದೇಶಿ ಅನುಮೋದನೆ ಪಡೆಯುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆಯಬೇಕು ಅಂದರೆ ಮೂರನೇ ಹಂತದ ಪ್ರಯೋಗದ ದಾಖಲೆಗಳನ್ನು ಸಲ್ಲಿಸಲೇಬೇಕು. ಆಗ ಮಾತ್ರ ಕೊವ್ಯಾಕ್ಸಿನ್ ಲಸಿಕೆಗೆ ವಿದೇಶಿ ಅನುಮೋದನೆ ಸಿಗಲಿದೆ.

ಇನ್ನು ಸೀರಂ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾದಲ್ಲಿ ತಯಾರಾಗುವ ಕೋವಿಶೀಲ್ಡ್​ ಲಸಿಕೆಗೆ ಬ್ರಿಟನ್ ಹಾಗೂ ಯುರೋಪಿಯನ್​ ಮೆಡಿಸಿನ್​ ರೆಗ್ಯುಲೇಟರ್​ನಿಂದ ಅನುಮೋದನೆ ದೊರಕಿದೆ. ಯುಎಸ್​ ಎಫ್​ಡಿಎ ಅನುಮೋದನೆ ಇನ್ನೂ ಬಾಕಿ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...