alex Certify ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ವೆಂಡಿಂಗ್ ಮಶಿನ್ ಅಳವಡಿಸಿದ ಐಎಎಸ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ವೆಂಡಿಂಗ್ ಮಶಿನ್ ಅಳವಡಿಸಿದ ಐಎಎಸ್ ಅಧಿಕಾರಿ

ಇಡೀ ವಿಶ್ವದಾದ್ಯಂತ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕೂಗು ಹೆಚ್ಚಾಗುತ್ತಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಪಣ ತೊಡಲಾಗಿದೆ. ಆದರೆ, ಪ್ಲಾಸ್ಟಿಕ್ ಬ್ಯಾಗ್ ಗಳು ಜನಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ಇವುಗಳ ಬಳಕೆ ಇನ್ನೂ ಇದೆ.

ಇದಕ್ಕೆ ಪರ್ಯಾಯವಾಗಿ ಬಟ್ಟೆ ಅಥವಾ ಇನ್ನಿತರೆ ಉತ್ಪನ್ನಗಳಿಂದ ತಯಾರಿಸಿದ ಬ್ಯಾಗ್ ಗಳನ್ನು ಬಳಸುವತ್ತ ಜನರು ಹೆಚ್ಚು ಮನಸು ಮಾಡುತ್ತಿಲ್ಲ. ಏಕೆಂದರೆ, ಇಂತಹ ಬ್ಯಾಗ್ ಗಳ ಕೊರತೆಯೂ ಒಂದು ಕಾರಣವಾಗಿದೆ.

ಆದರೆ, ಪರಿಸರದ ಬಗ್ಗೆ ಕಾಳಜಿ ಹೊಂದಿರುವ ತಮಿಳುನಾಡಿನ ಐಎಎಸ್ ಅಧಿಕಾರಿಯೊಬ್ಬರು ಬಟ್ಟೆಯ ಬ್ಯಾಗ್ ಗಳನ್ನು ಜನಪ್ರಿಯಗೊಳಿಸಲು ಮತ್ತು ಇವುಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಬ್ಯಾಗ್ ವೆಂಡಿಂಗ್ ಮಶಿನ್ ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

ಸುಪ್ರಿಯಾ ಸಾಹು ಎಂಬ ಈ ಅಧಿಕಾರಿ ಈ ಮಶಿನ್ ನ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 10 ರೂಪಾಯಿಯನ್ನು ಮಶಿನ್ ನಲ್ಲಿ ಹಾಕಿದರೆ ಅದರಿಂದ ಒಂದು ಬಟ್ಟೆಯ ಬ್ಯಾಗ್ ಹೊರ ಬರುತ್ತದೆ.

ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಹಳದಿ ಬಣ್ಣದ ಬ್ಯಾಗುಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಸಾಹು ಅವರು, ಮಂಜಪೈ(ಹಳದಿ ಬ್ಯಾಗ್) ವೆಂಡಿಂಗ್ ಮಶಿನ್ ಬಂದಿದೆ. ಕೈಗೆಟುಕುವ ದರದಲ್ಲಿ ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ಅನ್ನು ದೊರಕಿಸುವುದು ಒಂದು ಸವಾಲಿನ ಕೆಲಸವಾಗಿದೆ. ಆದರೆ, ಪರಿಸರ ರಕ್ಷಣೆಯ ಬದ್ಧತೆಯೊಂದಿಗೆ ಮಾರುಕಟ್ಟೆ ಸ್ಥಳಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಇಂತಹ ಮಶಿನ್ ಗಳನ್ನು ಸದ್ಯದಲ್ಲೇ ಅಳವಡಿಸಿ ಎಲ್ಲರಿಗೂ ಬ್ಯಾಗ್ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅವರು ಹಂಚಿಕೊಂಡಿರುವ ವಿಡಿಯೋವನ್ನು 45 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದ್ದು, ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...