alex Certify GOOD NEWS : ಇನ್ಮುಂದೆ ಇಂದಿರಾ ಕ್ಯಾಂಟೀನ್ ನಲ್ಲೂ ‘ನಂದಿನಿ’ ಉತ್ಪನ್ನಗಳು ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ಇನ್ಮುಂದೆ ಇಂದಿರಾ ಕ್ಯಾಂಟೀನ್ ನಲ್ಲೂ ‘ನಂದಿನಿ’ ಉತ್ಪನ್ನಗಳು ಲಭ್ಯ

ಬೆಂಗಳೂರು : ಬಡವರ್ ಫೈ ಸ್ಟಾರ್ ಇಂದಿರಾ ಕ್ಯಾಂಟೀನ್ ಮತ್ತಷ್ಟು ಹೈಟೆಕ್ ಆಗಲಿದ್ದು, ಇಂದಿರಾ ಕ್ಯಾಂಟೀನ್ ನಲ್ಲಿ ‘ನಂದಿನಿ’ ಉತ್ಪನ್ನಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಯೆಸ್, ಈ ಬಗ್ಗೆ ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ್ ಮಾಹಿತಿ ನೀಡಿದ್ದು, ಕೆಎಂಎಫ್ ಸಹಯೋಗದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಚಾಕೋಲೇಟ್ , ಬಿಸ್ಕತ್, ಐಸ್ ಕ್ರೀಂ , ಹಾಲು, ಮೊಸರು ಸೇರಿದಂತೆ ಹಲವು ನಂದಿನಿ ಉತ್ಪನ್ನಗಳು ಇಂದಿರಾ ಕ್ಯಾಂಟೀನ್ ನಲ್ಲಿ ಸಿಗಲಿದೆ. ಅಮೂಲ್ ಗೆ ಸೆಡ್ಡು ಹೊಡೆಯಲು ನಂದಿನಿ ತಯಾರಾಗಿದ್ದು, ಇಂದಿರಾ ಕ್ಯಾಂಟೀನ್ ಗೆ ಬರುವ ಜನರು ನಂದಿನಿ ಐಸ್ ಕ್ರೀಂ ಸವಿಯಬಹುದಾಗಿದೆ. ಈ ಮೂಲಕ ಇಂದಿರಾಕ್ಯಾಂಟೀನ್  ಮತ್ತಷ್ಟು ಹೈಟೆಕ್ ಆಗಲಿದೆ.

ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ಇನ್ಮುಂದೆ ಕಾಫಿ-ತಿಂಡಿ, ಊಟದ ದರ ಹೆಚ್ಚಳ

ಬೆಂಗಳೂರು : ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರ ನಡುವೆ ಹೋಟೆಲ್ ತಿಂಡಿ, ಊಟ, ಕಾಫಿ ದರ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ.

ಹೌದು, ಒಂದು ವಾರದಲ್ಲಿ ಬೆಂಗಳೂರಿನ ಹೋಟೆಲ್ ಗಳಲ್ಲಿ ಸದ್ದಿಲ್ಲದೇ ದರ ಏರಿಕೆಯಾಗಿದೆ. ಬೆಲೆ ಏರಿಸಲು ಹೋಟೆಲ್ ಮಾಲೀಕರ ಸಂಘ ಸೂಚನೆ ನೀಡದಿದ್ರೂ, ಕೆಲವು ಹೋಟೆಲ್ ಮಾಲೀಕರೇ ದರ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ವಿದ್ಯುತ್ ಬೆಲೆ ಏರಿಕೆಯ ಹಿನ್ನೆಲೆ ಎಲ್ಲಾ ಹೋಟೆಲ್ ಗಳಲ್ಲಿ ಊಟ, ತಿಂಡಿ, ಕಾಫಿ ದರವನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ. ವಿದ್ಯುತ್ ದರ ಹೆಚ್ಚಳದ ಹಿನ್ನೆಲೆ ಅನಿವಾರ್ಯವಾಗಿ ಹೋಟೆಲ್ ತಿನಿಸುಗಳ ದರ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಅಡುಗೆ ಅನಿಲ ಹಾಗೂ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ಹೋಟೆಲ್ ಊಟ ತಿಂಡಿ ದರ ಹೆಚ್ಚಳ ಮಾಡಲಾಗಿತ್ತು. ಅದೇ ರೀತಿ ವಾಣಿಜ್ಯ ಬಳಕೆಯ ಅಡುಗೆ ಅನಿಲ, ಹಾಲು, ತುಪ್ಪ, ಬೆಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳ ಬೆಲೆ ಕೂಡ ಹೆಚ್ಚಳವಾಗಿರುವ ಹಿನ್ನೆಲೆ ಹೋಟೆಲ್ ತಿನಿಸುಗಳ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...