alex Certify ಐಪಿಎಲ್ ಹರಾಜು 2022: ಈ ಟಾಪ್ 5 ಆಟಗಾರರಿಗೆ ಬಿಡ್ ಕೂಗದೇ ಇದ್ದರೂ ಅಚ್ಚರಿಯಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಹರಾಜು 2022: ಈ ಟಾಪ್ 5 ಆಟಗಾರರಿಗೆ ಬಿಡ್ ಕೂಗದೇ ಇದ್ದರೂ ಅಚ್ಚರಿಯಿಲ್ಲ

ಎಲೆ ಮರೆ ಕಾಯಿಯಂತಿದ್ದ ಬಹಳಷ್ಟು ಆಟಗಾರರಿಗೆ ಹೆಸರು ಖ್ಯಾತಿ ಕೊಟ್ಟಿರುವ ಐಪಿಎಲ್‌ನಲ್ಲಿ, ಹೆಸರೇ ಗೊತ್ತಿಲ್ಲದಂಥ ಅನೇಕ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗಿ ಅಚ್ಚರಿ ಮೂಡಿಸಿರುವ ಅನೇಕ ನಿದರ್ಶನಗಳ್ನು ಕಂಡಿದ್ದೇವೆ. ಇದೇ ವೇಳೆ, ಅನೇಕ ಬಾರಿ, ದೊಡ್ಡ ದೊಡ್ಡ ಹೆಸರುಗಳ ಆಟಗಾರರನ್ನು ತಂಡಗಳು ಹರಾಜಿನಲ್ಲಿ ಖರೀದಿ ಮಾಡದೇ ಇರುವುದೂ ಆಗಿದೆ.

ಐಪಿಎಲ್ 2022ಗೆ ಹರಾಜು ಪ್ರಕ್ರಿಯೆ ಆರಂಭವಾಗುವುದಕ್ಕೆ ಕ್ಷಣಗಣನೆ ಆರಂಭವಾಗುತ್ತಲೇ, 10 ಫ್ರಾಂಚೈಸಿಗಳು ತಮ್ಮ ಕಾಂಬಿನೇಷನ್‌ಗಳ ಲೆಕ್ಕಾಚಾರ ಮಾಡಿಕೊಂಡು ಕಾಯುತ್ತಿವೆ.

ಈ ಬಾರಿಯ ಹರಾಜಿನಲ್ಲಿ ಮಾರಾಟವಾಗದೇ ಹೋಗಬಹುದಾದ ಟಾಪ್ ಐದು ಆಟಗಾರರ ಪಟ್ಟಿ ಇಂತಿದೆ.

BIG BREAKING: ರಾಜ್ಯಾದ್ಯಂತ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಮುರಳಿ ವಿಜಯ್

ವರ್ಷಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದ ಮುರಳಿ ವಿಜಯ್ ಐಪಿಎಲ್‌ 2021ರ ಋತುವಿನಲ್ಲಿ ಕಾಣಿಸಿಕೊಂಡಿರಲಿಲ್ಲ. 2018 ರಿಂದ 2020ರವರೆಗೆ ಮೂರು ಸೀಸನ್‌ಗಳಲ್ಲಿ ಒಟ್ಟು 6 ಪಂದ್ಯಗಳನ್ನು ಮಾತ್ರ ವಿಜಯ್ ಆಡಿದ್ದಾರೆ. ಕಳೆದ ವರ್ಷದಿಂದ ಹೆಚ್ಚು ವೃತ್ತಿಪರ ಕ್ರಿಕೆಟ್ ಆಡಿಲ್ಲದ ವಿಜಯ್‌ಗೆ ಹರಾಜಿನಲ್ಲಿ ಬಿಡ್‌ಗಳು ಬರುವ ನಿರೀಕ್ಷೆ ಇಲ್ಲ.

ಕೇದಾರ್ ಜಾಧವ್

2010ರಲ್ಲಿ ಐಪಿಎಲ್‌ ಪಾದಾರ್ಪಣೆ ಮಾಡಿದಾಗಿಂದ ಅನೇಕ ಫ್ರಾಂಚೈಸಿಗಳ ಪರ ಆಡಿರುವ ಆಟದ ಮತ್ತೊಬ್ಬ ಅನುಭವಿ ಜಾಧವ್ 2021ರ ಸೀಸನ್‌ಗೆ ಮುಂಚಿತವಾಗಿ ಸನ್‌ರೈಸರ್ಸ್ ಹೈದರಾಬಾದ್‌ನಿಂದ ಖರೀದಿಸಲ್ಪಡುವ ಮೊದಲು 2020ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸದಸ್ಯರಾಗಿದ್ದರು. ಆದಾಗ್ಯೂ, ಜಾಧವ್ ಇನ್ನು ಮುಂದೆ ಭಾರತದ ಏಕದಿನ ತಂಡದ ಭಾಗವಾಗಿ ಕಾಣುವುದು ಬಹುತೇಕ ಅಸಾಧ್ಯವಾಗಿದ್ದು, ಕಳೆದ ವರ್ಷ ಹೆಚ್ಚು ಕ್ರಿಕೆಟ್ ಸಹ ಆಡಿಲ್ಲ. ಆದ್ದರಿಂದ, ಇವರು ಈ ಬಾರಿ ಬಿಡ್‌ಗಳನ್ನು ಆಕರ್ಷಿಸುವ ಅವನ ಸಾಧ್ಯತೆಗಳು ತೀರಾ ಕಡಿಮೆ.

ಇಶಾಂತ್ ಶರ್ಮಾ

ಭಾರತೀಯ ಟೆಸ್ಟ್ ತಂಡದಿಂದ ಬಹುತೇಕ ಹೊರಗುಳಿದಿರುವ ಇಶಾಂತ್ ಶರ್ಮಾ ಅವರ ಪ್ರದರ್ಶನದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಇಶಾಂತ್ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡುವ ನಿರೀಕ್ಷೆಯೂ ಇಲ್ಲ. ನಿರಂತರ ಗಾಯದ ಸಮಸ್ಯೆಗಳು ಇಶಾಂತ್‌ಗೆ ದೊಡ್ಡ ಚಿಂತೆಯಾಗಿವೆ. ಅನುಭವಿ ವೇಗಿ ಐಪಿಎಲ್‌ನಲ್ಲಿ 8.09 ಎಕಾನಮಿ ದರದಲ್ಲಿ 73 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಶಾಂತ್‌ ಈ ವರ್ಷದ ಹರಾಜಿನಲ್ಲಿ ಬಹುತೇಕ ಫ್ರಾಂಚೈಸಿಗಳ ಇಚ್ಛೆಯ ಪಟ್ಟಿಯಲ್ಲಿರುವ ಸಾಧ್ಯತೆಯಿಲ್ಲ.

ಚೇತೇಶ್ವರ್ ಪೂಜಾರ

ಐಪಿಎಲ್ 2021 ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚೇತೇಶ್ವರ ಪೂಜಾರ ಅವರಿಗೆ 50 ಲಕ್ಷ ರೂಪಾಯಿ ಪಾವತಿಸಿದಾಗ ಇಡೀ ಹರಾಜು ಕೊಠಡಿಯು ಚಪ್ಪಾಳೆ ತಟ್ಟಿತ್ತು. ಆದರೆ, ಪೂಜಾರ ಕಳೆದ ಋತುವಿನಲ್ಲಿ ಚೆನ್ನೈ ಫ್ರಾಂಚೈಸಿಗಾಗಿ ಒಂದೇ ಒಂದು ಪಂದ್ಯದಲ್ಲಿ ಆಡಿರಲಿಲ್ಲ. ಭಾರತದ ಟೆಸ್ಟ್ ತಂಡದಲ್ಲಿ ಪೂಜಾರಗೆ ಸ್ಥಾನ ಖಚಿತವಾಗದ ಕಾರಣ, ಸೌರಾಷ್ಟ್ರದ ಬ್ಯಾಟ್ಸ್‌ಮನ್ ಈ ಬಾರಿ ಒಪ್ಪಂದಕ್ಕೆ ಒಳಗಾದರೆ ಅದು ಅವರ ಅದೃಷ್ಟವಾಗಲಿದೆ.

ಹನುಮ ವಿಹಾರಿ

ವಿಹಾರಿಗೆ ಐಪಿಎಲ್ ಒಂದು ಆಸಕ್ತಿಕರ ವೃತ್ತಿಜೀವನವಾಗಿದೆ. ಅವರು ಮೊದಲ ಬಾರಿಗೆ 2013ರಲ್ಲಿ ಟಿ20 ಲೀಗ್‌ನಲ್ಲಿ ಕಾಣಿಸಿಕೊಂಡಿದ್ದು, ಒಟ್ಟಾರೆ ಲೀಗ್‌ನಲ್ಲಿ 17 ಪಂದ್ಯಗಳನ್ನು ಆಡಿದ್ದಾರೆ. 2014ರ ಐಪಿಎಲ್ ಋತುವಿನಲ್ಲಿ ಕಾಣಿಸಿಕೊಂಡಿರದ ಅವರು 2015ರ ಋತುವಿನಲ್ಲಿ ಪುನರಾಗಮನ ಮಾಡಿದ್ದರೂ ಸಹ ಆ ವೇಳೆ ಅವರು ಕೇವಲ 5 ಪಂದ್ಯಗಳನ್ನು ಆಡಿದ್ದರು.

ಇದಾದ ಬಳಿಕ ಮತ್ತೊಂದು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲು ವಿಹಾರಿ 2019ರವರೆಗೂ ಕಾಯಬೇಕಾಗಿ ಬಂತು. ಆದರೆ 2020 ಮತ್ತು 2021ರ ಋತುಗಳಲ್ಲಿ ವಿಹಾರಿ ಮತ್ತೊಮ್ಮೆ ತಂಡದ ಅಂತಿಮ 11ರ ಬಳಗದಲ್ಲಿ ಗೈರುಹಾಜರಾಗಿದ್ದರು. ವಿಹಾರಿ ಭಾರತದ ಟೆಸ್ಟ್ ತಂಡದಲ್ಲಿ ಮಾತ್ರ ಇರುವ ಮತ್ತೊಬ್ಬ ಆಟಗಾರನಾಗಿ ಉಳಿದಿದ್ದಾರೆ. ಬಿಳಿ ಚೆಂಡಿನ ಕ್ರಿಕೆಟ್‌ ಅನುಭವದ ಕೊರತೆಯಿಂದಾಗಿ, ಈ ಬಾರಿ ವಿಹಾರಿಗೆ ಬಿಡ್ ಕೂಗುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...