alex Certify ಹಬ್ಬದ ಸಂದರ್ಭದಲ್ಲಿ ಮನೆ ಖರೀದಿಸುವವರಿಗೆ ಬಂಪರ್‌ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಸಂದರ್ಭದಲ್ಲಿ ಮನೆ ಖರೀದಿಸುವವರಿಗೆ ಬಂಪರ್‌ ಗಿಫ್ಟ್

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತನ್ನು ಕೇಳಿಯೇ ಇರ್ತೀರಿ. ಕೈಯಲ್ಲಿ ಹಣವಿಲ್ಲ ಅಂದರೆ ಇವೆರಡೂ ಆಗುವ ಕೆಲಸವಲ್ಲ. ಅದರಲ್ಲೂ ಮನೆ ಖರೀದಿ ಮಾಡೋದು ಅಂದ್ರಂತೂ ಸುಲಭದ ಮಾತು ಅಲ್ಲವೇ ಅಲ್ಲ.

ದೊಡ್ಡ ದೊಡ್ಡ ನಗರಗಳಲ್ಲಿ ಅಪಾರ್ಟ್ಮೆಂಟ್​ಗಳಲ್ಲಿ ಮನೆ ಖರೀದಿ ಮಾಡಬೇಕು ಅಂದರೆ ಎಷ್ಟು ಹಣವಿದ್ದರೂ ಸಾಲದು
ಇನ್ನೇನು ಹಬ್ಬಗಳ ಸರಣಿಯೇ ನಮ್ಮ ಮುಂದಿದೆ. ಮನೆ ಖರೀದಿ ಮಾಡಬೇಕೆಂದುಕೊಂಡವರಿಗಂತೂ ನಿಜಕ್ಕೂ ಇದು ಸೂಕ್ತ ಸಮಯವಾಗಿದೆ.

ಏಕೆಂದರೆ ಈ ಸಮಯದಲ್ಲಿ ನೀವು ಮನೆ ಖರೀದಿ ಮಾಡಿದಲ್ಲಿ ನಿಮಗೆ ಭರ್ಜರಿ ಗಿಫ್ಟ್​ ಕೂಡ ಸಿಗಲಿದೆ.

ಗುರುಗ್ರಾಮದಲ್ಲಿ ಸಿಗ್ನೇಚರ್​ ಗ್ಲೋಬಲ್​ ತನ್ನ ಗ್ರಾಹಕರಿಗೆ ಚಿನ್ನದ ನಾಣ್ಯದ ಆಫರ್​ ನೀಡಿದೆ. ಸಿಗ್ನೇಚರ್​ ಗ್ಲೋಬಲ್​ ಸಿಟಿ 37 ಡಿಯಲ್ಲಿ ಫ್ಲ್ಯಾಟ್​ ಬುಕ್​ ಮಾಡಿದವರು 51 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯವನ್ನು ಪಡೆಯಲಿದ್ದಾರೆ. ಇದು ಮಾತ್ರವಲ್ಲದೇ ಫ್ಲೋರ್​ ಬುಕ್ಕಿಂಗ್​ ಮಾಡಿದ ಮೇಲೆ ಪ್ರತಿ ಚದರ ಮೀಟರ್​ಗೆ 100 ರೂಪಾಯಿ ವಿನಾಯ್ತಿ ಸಿಗಲಿದೆ.

ಟಿಡಿಐ ಇನ್ಫೋಟೆಕ್​​ ಪ್ರತಿ ಬುಕ್ಕಿಂಗ್​ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗಿದೆ. ಇದು ಮಾತ್ರವಲ್ಲದೇ ಒಬ್ಬ ಲಕ್ಕಿ ವಿನ್ನರ್​​ಗೆ ಬ್ರ್ಯಾಂಡ್​ ನ್ಯೂ ಹ್ಯುಂಡೈ ಕ್ರೆಟಾ ಕಾರು ಉಡುಗೊರೆಯ ರೂಪದಲ್ಲಿ ಸಿಗಲಿದೆ. ಮೊಹಾಲಿ ಎಂಬ ಯೋಜನೆಯ ಅಡಿಯಲ್ಲಿ ಈ ಭರ್ಜರಿ ಆಫರ್​ ಇಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...