alex Certify ‘ನಾಟು ನಾಟು’ ಹಾಡಿಗೆ ಕುಣಿದು ಕುಪ್ಪಳಿಸಿದ ಫ್ರೆಂಚ್ ವ್ಯಕ್ತಿ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾಟು ನಾಟು’ ಹಾಡಿಗೆ ಕುಣಿದು ಕುಪ್ಪಳಿಸಿದ ಫ್ರೆಂಚ್ ವ್ಯಕ್ತಿ….! ವಿಡಿಯೋ ವೈರಲ್

ವಿದೇಶಿಗರು ಬಾಲಿವುಡ್ ಚಲನಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿರುವ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ರೆ, ಅಮೆರಿಕಾದ ರಿಕಿ ಪಾಂಡ್ ಎಂಬುವವರು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿರುವ ವಿಡಿಯೋಗಳನ್ನು ನೋಡಿರಬಹುದು. ಇದೀಗ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ, ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಫ್ರಾನ್ಸ್‌ನ ಜಿಕಾ ಎಂಬ ವ್ಯಕ್ತಿ ತನ್ನ ಡ್ಯಾನ್ಸ್ ವಿಡಿಯೋ ಮೂಲಕ ದೇಶಿ ನೆಟ್ಟಿಗರನ್ನು ಬೆರಗುಗೊಳಿಸಿದ್ದಾನೆ. ಜಿಕಾ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ  ಅವರು, ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ತನ್ನ ಸ್ನೇಹಿತ ಯೂನ್ಸ್ ಜೊತೆಗೆ ಜಿಕಾ, ಹಿಟ್ ಹಾಡಿಗೆ ಕುಣಿದಿದ್ದಾರೆ. ಹಾಡಿನಲ್ಲಿ ಡ್ಯಾನ್ಸ್ ಮಾಡಿರುವಂತೆಯೇ ಜಿಕಾ ತನ್ನ ಸ್ನೇಹಿತನ ಜೊತೆ ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಜಿಕಾ, ಭಾರತೀಯ ಸಿನಿಮಾದ ಹಾಡಿಗೆ ಕುಣಿದಿರುವುದು ಇದೇ ಮೊದಲೇನಲ್ಲ. ಈ ಹಿಂದೆ, ಅವರು ಬಾಲಿವುಡ್ ನ ಸೂರ್ಯವಂಶಿ ಚಿತ್ರದ ಟಿಪ್ ಟಿಪ್ ಬರ್ಸಾ ಪಾನಿ ಮತ್ತು ಇನ್ನೂ ಕೆಲವು ಹಿಟ್ ಹಾಡುಗಳಿಗೆ ತಮ್ಮ ಸ್ನೇಹಿತರೊಂದಿಗೆ ನೃತ್ಯ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...