alex Certify ಶಾಕಿಂಗ್​ : ಸ್ಪೇನ್ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ಸೋಂಕು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​ : ಸ್ಪೇನ್ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ಸೋಂಕು..!

ಸ್ಪೇನ್​​ನ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿದೆ ಎಂದು ಪಶು ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಂಹಗಳು ಮಾತ್ರವಲ್ಲದೇ, ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ವೈರಸ್​ ಲಕ್ಷಣಗಳು ಕಂಡು ಬಂದ ಬಳಿಕ ಮೂರು ಹೆಣ್ಣು ಹಾಗೂ ಒಂದು ಗಂಡು ಸಿಂಹಕ್ಕೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಝಾಲಾ, ನೀಮಾ, ರನ್​ರನ್​ ಹಾಗೂ ಕಿಯಂಬೆ ಎಂಬ ಹೆಸರಿನ ಸಿಂಹಗಳಿಗೆ ಸೋಂಕು ದೃಢಪಟ್ಟಿದೆ.

ಈ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಅನ್ನೋದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ವರ್ಷದ ಗಂಡು ಸಿಂಹ ಹಾಗೂ 16 ವರ್ಷದ ಮೂವರು ಹೆಣ್ಣು ಸಿಂಹಗಳು ಮೃಗಾಲಯದ ಇತರೆ ಯಾವುದೇ ಪ್ರಾಣಿಗಳ ಜೊತೆ ಸಂಪರ್ಕವನ್ನ ಹೊಂದಿಲ್ಲ . ಸದ್ಯ ಸಿಂಹಗಳ ಸ್ಥಿತಿ ಸ್ಥಿರವಾಗಿದ್ದು, ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...