![](https://kannadadunia.com/wp-content/uploads/2022/01/olivia.png)
ಕೆಲವೊಮ್ಮೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಮೇಲೆ ಹೇರುವ ವಸ್ತ್ರಸಂಹಿತೆಯು ನಗು ತರಿಸುತ್ತವೆ. ಇಂತಹ ನಿಯಮಗಳೇ ಪ್ರಯಾಣಿಕರಿಗೆ ಕಿರಿಕಿರಿಯುಂಟು ಮಾಡುತ್ತವೆ. ಇದೇ ರೀತಿ ಮಾಜಿ ಭುವನ ಸುಂದರಿಗೇ ವಸ್ತ್ರಸಂಹಿತೆ ಕಾರಣದಿಂದ ವಿಮಾನ ಹತ್ತುವಾಗ ಮುಜುಗರ ಉಂಟಾಗಿದೆ.
2012 ರಲ್ಲಿ ಭುವನ ಸುಂದರಿ ಪಟ್ಟಕ್ಕೇರಿದ್ದ 29 ವರ್ಷದ ಒಲಿವಿಯಾ ಕಲ್ಪೊ ಅವರು ಕಳೆದ ಗುರುವಾರ ತುಂಡುಡುಗೆ ಧರಿಸಿ ಮೆಕ್ಸಿಕೋದಲ್ಲಿ ಅಮೆರಿಕನ್ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಹತ್ತಲು ಮುಂದಾದಾಗ ವಿಮಾನದ ಸಿಬ್ಬಂದಿಯು ಅವರನ್ನು ತಡೆದಿದ್ದಾರೆ.
ʼಓಮಿಕ್ರಾನ್ʼ ಕುರಿತ ಅಧ್ಯಯನದಲ್ಲಿ ಭರ್ಜರಿ ಗುಡ್ ನ್ಯೂಸ್ ಬಹಿರಂಗ
ನಿಯಮಗಳ ಪ್ರಕಾರ ತುಂಡುಡುಗೆ ಧರಿಸಿ ವಿಮಾನ ಹತ್ತುವಂತಿಲ್ಲ ಎಂದಿದ್ದಾರೆ. ಅಷ್ಟಕ್ಕೂ, ಸ್ಪೋರ್ಟ್ಸ್ ಬ್ರಾ, ಶಾರ್ಟ್ಸ್ ಧರಿಸಿದ ಒಲಿವಿಯಾ ಹಲವು ಬಾರಿ ವಿಮಾನದ ಸಿಬ್ಬಂದಿಗೆ ಬಟ್ಟೆ ಕುರಿತು ಮನವರಿಕೆ ಮಾಡಿದ್ದಾರೆ. ಅಲ್ಲದೆ, ತಾನು ಬೇರೆ ಬಟ್ಟೆ ತಂದಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.
ಹೀಗಾದರೂ ವಿಮಾನದ ಸಿಬ್ಬಂದಿಯು ಒಲಿವಿಯಾ ಅವರು ವಿಮಾನ ಹತ್ತದಂತೆ ತಡೆದಿದ್ದಾರೆ. ಕೊನೆಗೆ ತಮ್ಮ ಜತೆ ಪ್ರಯಾಣಿಸುತ್ತಿದ್ದ ಬಾಯ್‌ಫ್ರೆಂಡ್ ಆದ ಕ್ರಿಸ್ಟಿಯನ್ ಅವರ ಟಿ-ಶರ್ಟ್ ಧರಿಸಿದ ಬಳಿಕವೇ ಒಲಿವಿಯಾ ಅವರನ್ನು ವಿಮಾನ ಹತ್ತಿಸಲಾಗಿದೆ. ಗೆಳತಿ ಜತೆ ಖುಷಿಯಿಂದ ಹೊರಟಿದ್ದ ಕ್ರಿಸ್ಟಿಯನ್ ಅವರು ಇಡೀ ಪ್ರಯಾಣವನ್ನು ಟಿ-ಶರ್ಟ್ ಇಲ್ಲದೆ ಕಳೆಯುವಂತಾಗಿದೆ.
ವಿಮಾನದ ಸಿಬ್ಬಂದಿಯ ವರ್ತನೆ ಕುರಿತು ಒಲಿವಿಯಾ ಸಹೋದರಿ ಔರೋರಾ ಅವರು ಜಾಲತಾಣದಲ್ಲಿ ವಿಡಿಯೊ ಶೇರ್ ಮಾಡಿದ್ದು, ಸಿಬ್ಬಂದಿಯ ವರ್ತನೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ತುಂಡುಡುಗೆ ಧರಿಸಿ ವಿಮಾನ ಹತ್ತುವಂತಿಲ್ಲ ಎಂಬುದು ನಮ್ಮ ವಿಮಾನಯಾನ ಸಂಸ್ಥೆಯ ನಿಯಮವಾಗಿದೆ ಎಂದು ಅಮೆರಿಕನ್ ಏರ್‌ಲೈನ್ಸ್ ಸ್ಪಷ್ಟನೆ ನೀಡಿದೆ.
![](https://akm-img-a-in.tosshub.com/indiatoday/images/story/202201/BeFunky-collage_-_2022-01-15T1.jpg?lAauBb80062bqX7AM9VXgJHcJNkohkiX&size=770:433)
![](https://akm-img-a-in.tosshub.com/indiatoday/images/bodyeditor/202201/Screenshot__3172_-x2030.png?6aN7FzofgrXOwQ5Pm.AmkfYUxIblSlJB)
![](https://akm-img-a-in.tosshub.com/indiatoday/images/bodyeditor/202201/Screenshot__3175_-x2178.png?9WCEXiecSapBQL5gnz5JtlAmMwVt_tyf)