alex Certify ‘ಹರ್​ ಘರ್​ ತಿರಂಗಾ’ ರ್ಯಾಲಿ ವೇಳೆ ಗುಜರಾತ್​ ಮಾಜಿ DCM ಮೇಲೆ ಹಸುಗಳ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹರ್​ ಘರ್​ ತಿರಂಗಾ’ ರ್ಯಾಲಿ ವೇಳೆ ಗುಜರಾತ್​ ಮಾಜಿ DCM ಮೇಲೆ ಹಸುಗಳ ದಾಳಿ

ಗುಜರಾತ್​ನ ಮೆಹ್ಸಾನಾದಲ್ಲಿ ತಿರಂಗ ಯಾತ್ರೆ ವೇಳೆ ಗುಜರಾತ್​ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​ ಗಾಯಗೊಂಡಿದ್ದಾರೆ.

ಮೆರವಣಿಗೆಯ ನಡುವೆ ದನಗಳ ಹಿಂಡು ಬಂದಿದ್ದು, ಇದರಿಂದ ತ್ರಿವರ್ಣ ಯಾತ್ರೆ ವೇಳೆ ಗೊಂದಲ ಉಂಟಾಗಿತ್ತು. ಈ ವೇಳೆ ನೂಕಾಟ ನಡೆದು ಅನೇಕರಿಗೆ ಗಾಯಗಳಾಯಿತು.

ಆಗಸ್ಟ್​ 13ರಿಂದ 15ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ್​ ಮಹೋತ್ಸವದ ಅಂಗವಾಗಿ ಮೂರು ದಿನಗಳ “ತಿರಂಗಾ ಅಭಿಯಾನ” ವನ್ನು ಘೋಷಿಸಿದ್ದು, ಈ ಅಭಿಯಾನದ ಅಂಗವಾಗಿ ದೇಶದಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ಈ ಕರೆಯ ಭಾಗವಾಗಿ ಗುಜರಾತ್​ನಲ್ಲೂ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ನೂರಾರು ಜನರು ತ್ರಿವರ್ಣ ಧ್ವಜ ಹಿಡಿದು ಸಾಗುತ್ತಿದ್ದ ವೇಳೆ ಒಂದು ಹಸು ಗಾಬರಿಯಿಂದ ಅವರತ್ತ ನುಗ್ಗಿದೆ. ಇದರಿಂದ ಅನೇಕರು ನೆಲಕ್ಕುರುಳಿದರು. ಪಟೇಲ್​ ಕೂಡ ಕೆಳಗುರುಳಿದ ವಿಡಿಯೋ ವೈರಲ್​ ಆಗಿದೆ. ತಕ್ಷಣವೇ ಪಟೇಲ್​ ಸೇರಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಟೇಲ್​ ಅವರ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...