alex Certify ಫುಟ್ಬಾಲ್ ದಂತಕಥೆ ಮರಡೋನಾರ 20 ಲಕ್ಷ ರೂ. ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ವಶ: ಆರೋಪಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ದಂತಕಥೆ ಮರಡೋನಾರ 20 ಲಕ್ಷ ರೂ. ಬೆಲೆಬಾಳುವ ವಾಚ್ ಅಸ್ಸಾಂನಲ್ಲಿ ವಶ: ಆರೋಪಿ ಸೆರೆ

ಗುವಾಹಟಿ: ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ 20 ಲಕ್ಷ ರೂ. ಮೌಲ್ಯದ ಹೆರಿಟೇಜ್ ಹ್ಯೂಬ್ಲಾಟ್ ವಾಚ್ ಅನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ವಾಜಿದ್ ಹುಸೇನ್ ಎಂಬಾತನ ಮನೆಯಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ಐಷಾರಾಮಿ ಗಡಿಯಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಸ್ಸಾಂನ ಶಿವಸಾಗರ್ ಜಿಲ್ಲೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಾಚ್ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಕದ ಚರೈಡಿಯೊ ಜಿಲ್ಲೆಯ ಅತ್ತೆಯ ಮನೆಯಲ್ಲಿದ್ದ ಹುಸೇನ್ ನನ್ನು ಖಾಕಿ ಪಡೆ  ಬಂಧಿಸಿದೆ.

ಅಂತಾರಾಷ್ಟ್ರೀಯ ಸಹಕಾರದ ಪ್ರಕ್ರಿಯೆಯಲ್ಲಿ, ಅಸ್ಸಾಂ ಪೊಲೀಸರು ಭಾರತೀಯ ಫೆಡರಲ್ ಮೂಲಕ ದುಬೈ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಫುಟ್ಬಾಲ್ ದಂತಕಥೆ ದಿವಗಂತ ಡಿಯಾಗೋ ಮರಡೋನಾಗೆ ಸೇರಿದ ಹೆರಿಟೇಜ್ ಹ್ಯೂಬ್ಲಾಟ್ ವಾಚ್ ಅನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ವಾಜಿದ್ ಹುಸೇನ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಶಿವಸಾಗರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರೌಶನ್ ಅವರು ದುಬೈ ಪೊಲೀಸರಿಂದ ಬಂದ ಮಾಹಿತಿಯನ್ನು ಉಲ್ಲೇಖಿಸಿ, ಮರಡೋನಾ ದುಬೈನಲ್ಲಿ ತಂಗುತ್ತಿದ್ದ ಸ್ಥಳದಲ್ಲಿ ಹುಸೇನ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಅಲ್ಲಿದ್ದ ಹಲವಾರು ವಸ್ತುಗಳನ್ನು ಕದ್ದು ಆಗಸ್ಟ್ 2020ರಲ್ಲಿ ಆತ ಭಾರತಕ್ಕೆ ಮರಳಿದ್ದ. ಈ ಪೈಕಿ ಹ್ಯೂಬ್ಲೋಟ್ ವಾಚ್ ಕೂಡ ಸೇರಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೆಕ್ಸಿಕೋದಲ್ಲಿ 1986ರ ವಿಶ್ವಕಪ್ ಸೇರಿದಂತೆ ನಾಲ್ಕು ಫಿಪಾ ವಿಶ್ವಕಪ್‌ಗಳಲ್ಲಿ ಆಡಿದ ಮರಡೋನಾ, ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದರು. ನವೆಂಬರ್ 25, 2020 ರಂದು 60ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...