alex Certify ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕಿನಿ ಸ್ಥಳದಲ್ಲಿ ಶೇವ್ ಮಾಡುವಾಗ ಫಾಲೋ ಮಾಡಿ ಈ ಟಿಪ್ಸ್

ಬಿಕಿನಿ ತೊಡುವ ಮಹಿಳೆಯರು ಆ ಭಾಗಗಳಲ್ಲಿ ಕೂದಲನ್ನು ಕ್ಷೌರ ಮಾಡುತ್ತಾರೆ. ಆದರೆ ಅಲ್ಲಿನ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಕೆಲವೊಮ್ಮೆ ದದ್ದುಗಳು, ತುರಿಕೆಗಳು ಉಂಟಾಗುತ್ತದೆ. ಹಾಗಾಗಿ ನಯವಾದ ಚರ್ಮವನ್ನು ಪಡೆಯಲು ಈ ನಿಯಮಗಳನ್ನು ಪಾಲಿಸಿ.

*ಮಹಿಳೆಯರು ಕ್ಷೌರ ಮಾಡಲು ಬಳಸುವ ರೇಜರ್ ಸ್ವಚ್ಚವಾಗಿರಲಿ. ಉತ್ತಮವಾಗಿರುವ ರೇಜರ್ ಗಳನ್ನು ಆರಿಸಿ. ಅದನ್ನು ಆಗಾಗ ಸ್ವಚ್ಚ ಮಾಡುತ್ತಿರಿ.

*ನೀವು ಕ್ಷೌರ ಮಾಡುವ ಮುನ್ನ ಆ ಪ್ರದೇಶವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮ ಮೃದುಗೊಳ್ಳುತ್ತದೆ. ಮತ್ತು ಸತ್ತ ಚರ್ಮಗಳು ನಿವಾರಣೆಯಾಗಿ ಸುಲಭವಾಗಿ ಶೇವ್ ಮಾಡಬಹುದು.

*ಶೇವಿಂಗ್ ಮಾಡುವ ಮುನ್ನ ಶೇವಿಂಗ್ ಕ್ರೀಂಗಳನ್ನು, ಶಾಂಪು, ಸೋಪ್ ಗಳನ್ನು ಬಳಸಿ. ಇದರಿಂದ ತುರಿಕೆ, ಸುಡುವ ವೇದನೆ ಮತ್ತು ದದ್ದುಗಳು ಕಡಿಮೆಯಾಗುತ್ತದೆ.

*ನಿಮ್ಮ ಬಿಕಿನಿ ಸ್ಥಳಗಳಲ್ಲಿ ದದ್ದುಗಳು, ಸೋಂಕುಗಳಂತಹ ಯಾವುದೇ ಚರ್ಮದ ಸಮಸ್ಯೆಗಳಿದ್ದರೆ ಆ ವೇಳೆ ಶೇವಿಂಗ್ ಮಾಡಲು ಹೋಗಬೇಡಿ. ಇದರಿಂದ ಆ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಸಮಸ್ಯೆ ಗಂಭೀರವಾಗಬಹುದು.

*ಕ್ಷೌರ ಮಾಡಿದ ಬಳಿಕ ಆ ಪ್ರದೇಶವನ್ನು ತಕ್ಷಣ ತೊಳೆಯಿರಿ. ಬಳಿಕ ಮಾಯಿಶ್ಚರೈಸರ್ ಕ್ರೀಂಗಳನ್ನು ಹಚ್ಚಿ. ಇದರಿಂದ ಇನ್ ಫೆಕ್ಷನ್, ಕಿರಿಕಿರಿಯಾಗುವುದು ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...