alex Certify ಬಂಧನ ತಪ್ಪಿಸಿಕೊಳ್ಳಲು ಸೈಕಲ್‌ ಏರಿದ ಭೂಪ…! ಕಾಲ್ನಡಿಗೆಯಲ್ಲಿ ಬಂದ ಪೊಲೀಸ್‌ ಗೆ ಸಿಕ್ಕಿಬಿದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನ ತಪ್ಪಿಸಿಕೊಳ್ಳಲು ಸೈಕಲ್‌ ಏರಿದ ಭೂಪ…! ಕಾಲ್ನಡಿಗೆಯಲ್ಲಿ ಬಂದ ಪೊಲೀಸ್‌ ಗೆ ಸಿಕ್ಕಿಬಿದ್ದ

ಬಂಧನವಾಗುವುದನ್ನು ತಪ್ಪಿಸಿಕೊಳ್ಳಲು ಯುವಕನೊಬ್ಬ ಬೈಸಿಕಲ್​ ಏರಿ ಪ್ರಯತ್ನಿದರೂ ಪೊಲೀಸರು ಕಾಲ್ನಡಿಗೆಯಲ್ಲೇ ಸಾಗಿ ಆತನನ್ನು ವಶಕ್ಕೆ ಪಡೆದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ.

24 ವರ್ಷದ ಟೊಮಾರಿಯಸ್​ ಜೇಮ್ಸ್​ ವ್ಯಾಗ್ನರ್​ ಡ್ರಗ್ಸ್​ ಸೇವನೆ ಪರೀಕ್ಷಾ ಷರತ್ತು ಉಲ್ಲಂಘಿಸಿದ ನಂತರ ಅಧಿಕಾರಿಯಿಂದ ತಪ್ಪಿಸಿಕೊಳ್ಳಲು ಸೈಕಲ್​ ಏರಿದ್ದ. ಆದರೆ ಬೆನ್ನಟ್ಟಿ ಬಂಧಿಸಲಾಯಿತು.

ಬ್ರೆವಾರ್ಡ್​ ಕೌಂಟಿ ಶೆರಿಫ್​ ವೇಯ್ನ ಐವಿ ಪ್ರಕಾರ, ನಿಜ ಹೇಳಬೇಕೆಂದರೆ ವ್ಯಾಗ್ನರ್​ ಬೈಸಿಕಲ್​ ಬಳಸಿ ಪರಾರಿಯಾಗಲು ಪ್ರಯತ್ನಿಸುತ್ತಿರುವುದು ಅಥವಾ ಕಾಲ್ನಡಿಗೆಯಲ್ಲಿ ಓಡಿಹೋಗುವುದರಲ್ಲಿ ಯಾವುದು ಕೆಟ್ಟದು ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.  ಹಾಗೆಯೇ ತನಿಖಾ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ಸೋಮವಾರ ಫ್ಲೋರಿಡಾದ ವ್ಯಕ್ತಿಯೊಬ್ಬರು 120 ಡಾಲರ್​ಗೆ ಬ್ಯಾಂಕ್​ ಅನ್ನು ದರೋಡೆ ಮಾಡಲು ಪ್ರಯತ್ನಿಸಿದಾಗ 10 ನಿಮಿಷಗಳಲ್ಲಿ ಬಂಧಿಸಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...