alex Certify ಕನ್ವೇಯರ್ ಬೆಲ್ಟ್‌ನಿಂದ ಬಂದ ಸೂಟ್​ಕೇಸ್​ ಸ್ಥಿತಿ ನೋಡಿ ಬೆಚ್ಚಿಬಿದ್ದ ಪ್ರಯಾಣಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ವೇಯರ್ ಬೆಲ್ಟ್‌ನಿಂದ ಬಂದ ಸೂಟ್​ಕೇಸ್​ ಸ್ಥಿತಿ ನೋಡಿ ಬೆಚ್ಚಿಬಿದ್ದ ಪ್ರಯಾಣಿಕ

ವಿಮಾನ ನಿಲ್ದಾಣದಲ್ಲಿ ಕನ್ವೇಯರ್ ಬೆಲ್ಟ್‌ನಲ್ಲಿ ಬಂದ ಪ್ರಯಾಣಿಕರ ಸೂಟ್​ಕೇಸ್​ ಒಂದು ಸಂಪೂರ್ಣ ಹಾನಿಗೊಳಗಾದ ಘಟನೆಯೊಂದು ನಡೆದಿದ್ದು, ವಿಮಾನ ಪ್ರಯಾಣಿಕರನ್ನು ಈ ಫೋಟೋ ಭಯಗೊಳಿಸುತ್ತಿದೆ.

ರೆಡ್ಡಿಟ್ ಬಳಕೆದಾರರು ಆನ್‌ಲೈನ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ಅಂಕಲ್‌ ಸೂಟ್‌ ಕೇಸ್‌ ಗೆ ಈ ರೀತಿ ದುರವಸ್ಥೆ ಆಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಸೂಟ್​ಕೇಸ್​ ಚಿತ್ರ ನೋಡಿದರೆ ಮಾತ್ರ ನಿಜಕ್ಕೂ ಶಾಕ್​ ಆಗುವಂತಿದೆ. ಈ ಚಿತ್ರವನ್ನು ನೋಡಿದ ಪ್ರಯಾಣಿಕರು ತಮ್ಮ ಲಗೇಜ್‌ಗಳ ಸುರಕ್ಷತೆಯ ಬಗ್ಗೆ ಭಯಪಡುವಂತಾಗಿದೆ.

ವಿದೇಶಗಳಿಗೆ ಪ್ರಯಾಣಿಸುವಾಗ ಸೂಟ್‌ಕೇಸ್‌ಗಳಲ್ಲಿ ಬೆಲೆಬಾಳುವ ವಸ್ತುಗಳೂ ಇರುತ್ತವೆ. ಮಾತ್ರವಲ್ಲದೇ ಅತಿ ಮಹತ್ವದ ದಾಖಲೆಗಳನ್ನೂ ಕೆಲವೊಮ್ಮೆ ತೆಗೆದುಕೊಂಡು ಹೋಗಲಾಗುತ್ತದೆ. ಇಂಥ ಸಂದರ್ಭದಲ್ಲಿ ಈ ರೀತಿ ಅಸಡ್ಡೆ ಮಾಡಿದರೆ ತಮ್ಮ ಗತಿಯೇನು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದು ಯಾವ ಏರ್​ಪೋರ್ಟ್​ನಲ್ಲಿ ಆಗಿದ್ದು ಎಂಬ ಬಗ್ಗೆ ಮಾಹಿತಿ ನೀಡಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...