alex Certify 6 ತಿಂಗಳಲ್ಲಿ ಸಣ್ಣ ಗಳಿಕೆಗೆ ಅವಕಾಶ ನೀಡ್ತಿವೆ ಈ ಬ್ಯಾಂಕ್ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ತಿಂಗಳಲ್ಲಿ ಸಣ್ಣ ಗಳಿಕೆಗೆ ಅವಕಾಶ ನೀಡ್ತಿವೆ ಈ ಬ್ಯಾಂಕ್ ಗಳು

ಬ್ಯಾಂಕ್ ಗಳು ಅನೇಕ ಸೌಲಭ್ಯಗಳನ್ನು ನೀಡ್ತಿವೆ. ಆದ್ರೆ ಗ್ರಾಹಕರಿಗೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಹೂಡಿಕೆ ಬಗ್ಗೆ ಪ್ಲಾನ್ ಮಾಡ್ತಿರುವ ಜನರು, ಎಫ್ ಡಿ ಮೂಲಕ ಸಣ್ಣ ಪ್ರಮಾಣದಲ್ಲಿ ಹಣ ಗಳಿಸಬಹುದು. ಬ್ಯಾಂಕ್ ಎಫ್ಡಿ ಮೂಲಕ ಕೇವಲ 6 ತಿಂಗಳಲ್ಲಿ, ಹಣ ಗಳಿಸಬಹುದು. ಬ್ಯಾಂಕ್, ಎಫ್ಡಿ  ಸೌಲಭ್ಯವನ್ನು ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ನೀಡುತ್ತದೆ.

ಎಸ್ಬಿಐ, ಪಿಎನ್ಬಿ, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಐಸಿಐಸಿಐ ನಂತಹ ದೊಡ್ಡ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6 ತಿಂಗಳು ಎಫ್ಡಿ ಮಾಡಿದರೆ,ಶೇಕಡಾ 3.90ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು. ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡಾ 4.40 ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತದೆ.

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇಕಡಾ 3ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿದೆ. 6 ತಿಂಗಳ ಎಫ್ಡಿಯಲ್ಲಿ, ಬ್ಯಾಂಕ್ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 3 ಬಡ್ಡಿಯನ್ನು ನೀಡುತ್ತಿದೆ.

ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್, ಎಚ್‌ಡಿಎಫ್‌ಸಿ, ಸಾಮಾನ್ಯ ನಾಗರಿಕರು ಇಲ್ಲಿ ಶೇಕಡಾ 3.50  ದರದಲ್ಲಿ ಬಡ್ಡಿ ನೀಡ್ತಿದೆ. ಹಿರಿಯ ನಾಗರಿಕರು ಶೇಕಡಾ 4ರ ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರಿಗೆ 6 ತಿಂಗಳ ಕಾಲ ಸ್ಥಿರ ಠೇವಣಿಗಳ ಮೇಲೆ ಶೇಕಡಾ 4ರ ಬಡ್ಡಿಯ ಲಾಭವನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇಕಡಾ 4.50 ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ.

ಕೆನರಾ ಬ್ಯಾಂಕ್ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 4ರ  ದರದಲ್ಲಿ ಬಡ್ಡಿ ನೀಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...