alex Certify ಇಲ್ಲಿದೆ ಕೃಷಿಗೆ ಅಗತ್ಯವಿರುವ ತಂತ್ರಜ್ಞಾನಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕೃಷಿಗೆ ಅಗತ್ಯವಿರುವ ತಂತ್ರಜ್ಞಾನಗಳ ಮಾಹಿತಿ

ಭಾರತದ ಜಿಡಿಪಿಗೆ ಕೃಷಿ ಅಥವಾ ಇತರ ಕೃಷಿ ಸೇವೆಗಳು ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ. ಕಾಲದ ಜೊತೆ ಬದಲಾಗುತ್ತಿರುವ ತಂತ್ರಜ್ಞಾನಗಳು ಮತ್ತು ಪ್ರಗತಿ ಸಾಧನಗಳೊಂದಿಗೆ ಭಾರತೀಯ ಕೃಷಿಯು ಉತ್ತಮ ಬೆಳವಣಿಗೆ ಕಂಡಿದೆ. ಜಾನುವಾರು ಬಿತ್ತನೆಯನ್ನು ಟ್ರ್ಯಾಕ್ಟರ್‌ಗಳು ಮತ್ತು ಇತರ ಯಂತ್ರಗಳೊಂದಿಗೆ ಬದಲಾಯಿಸಲಾಗಿದೆ.

ಬೆಳೆಗಳನ್ನು ಕತ್ತರಿಸುವುದು ಇನ್ನು ಮುಂದೆ ಕೈಯಿಂದ ಮಾಡುವ ಚಟುವಟಿಕೆಯಲ್ಲ. ಅದರಂತೆಯೇ, ತಂತ್ರಜ್ಞಾನವು ಕೃಷಿ ಕ್ಷೇತ್ರಕ್ಕೆ ಮ್ಯಾಜಿಕ್ ಎಂದು ಸಾಬೀತಾಗಿದೆ.

ಇತ್ತೀಚೆಗೆ, ಸರ್ಕಾರವು ಕೃಷಿ ವಲಯದ ಡಿಜಿಟಲ್ ವಿಸ್ತರಣೆಯನ್ನು ಘೋಷಿಸಿದೆ. ಇದು ಡಿಜಿಟಲ್ ಕೃಷಿ ಕ್ಷೇತ್ರಕ್ಕೆ ಸ್ಟಾರ್ಟ್-ಅಪ್‌ಗಳ ಆಗಮನಕ್ಕೆ ಕಾರಣವಾಗಲಿದೆ. ಜೊತೆಗೆ ಇಡೀ
ವಲಯದಲ್ಲಿ ಕ್ರಾಂತಿಯನ್ನು ತರಲು ಅವಕಾಶ ನೀಡುತ್ತದೆ. ಕೃಷಿಗೆ ಇನ್ನೂ ಅನೇಕ ತಂತ್ರಜ್ಞಾನಗಳ ಪರಿಷ್ಕರಣೆಯ ಅಗತ್ಯವಿದೆ.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ: ಹೆಚ್.ಡಿ. ಕುಮಾರಸ್ವಾಮಿ

ಕೃಷಿಯನ್ನು ಸಂಪೂರ್ಣವಾಗಿ ಪರಿವರ್ತಿಸುವ ಕೆಲವು ಆವಿಷ್ಕಾರಗಳನ್ನು ನೋಡೋಣ

3D ರಾಸಾಯನಿಕ ಮುದ್ರಣ(3D Chemical printing)

3ಡಿ ಪ್ರಿಂಟರ್‌ಗಳನ್ನು ಭಾರತದ ಕೃಷಿ ವಲಯಕ್ಕೆ ಪರಿಚಯಿಸಿದರೆ ದೊಡ್ಡ ಕ್ರಾಂತಿಯನ್ನೇ ಮಾಡಬಹುದು. ಈ ತಂತ್ರಜ್ಞಾನದ ಮೂಲಕ, ರೈತರು ತಮ್ಮ ಜಮೀನಿನಲ್ಲಿಯೆ ಸಸ್ಯನಾಶಕಗಳು, ಕೀಟನಾಶಕಗಳು ಮತ್ತು ಪಶುವೈದ್ಯಕೀಯ ಔಷಧಗಳಂತಹ ಪ್ರಮುಖ ಕೃಷಿ ರಾಸಾಯನಿಕಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಅಗತ್ಯ ರಾಸಾಯನಿಕಗಳನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಉತ್ಪಾದಿಸಬಹುದು, ಹೆಚ್ಚು ಸಮಯದ ಅಗತ್ಯವು ಇಲ್ಲ.

ಅಕ್ವಾಪೋನಿಕ್ಸ್(Aquaponics)

ಸುಸ್ಥಿರ ವಾತಾವರಣದಲ್ಲಿ ಎರಡು ತಂತ್ರಜ್ಞಾನಗಳ ಸಂಯೋಜನೆಯ ಮೂಲಕ ನಗರ ಪ್ರದೇಶಗಳಲ್ಲಿಯೂ ಸಹ ಆಹಾರವನ್ನು ಉತ್ಪಾದಿಸಬಹುದು.

ಹೈಡ್ರೋಪೋನಿಕ್ಸ್ ತಂತ್ರಜ್ಞಾನ ಅಂದರೆ ಮಣ್ಣಿಲ್ಲದೆ ನೀರಿನಲ್ಲಿ ಸಸ್ಯಗಳನ್ನು ಬೆಳೆಸುವ ವಿಧಾನ, ಹಾಗೆಯೇ ಮೀನು ಸಾಕಣೆ. ಜನಸಂಖ್ಯೆ ಹೆಚ್ಚಳ ನೋಡುತ್ತಿದ್ದರೆ, 2050 ರ ವೇಳೆಗೆ ವಿಶ್ವದಲ್ಲಿ 70% ನಗರೀಕರಣವಾಗಿರುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಪ್ರಪಂಚಕ್ಕೆ ಸಾಂಪ್ರದಾಯಿಕ ಕೃಷಿಗೆ ಪರ್ಯಾಯ ಕೃಷಿಯ ಅಗತ್ಯವಿದೆ.

ಆಕ್ವಾಪೋನಿಕ್ಸ್ ಟೆಕ್ನಾಲಜಿಯನ್ನು ಉತ್ತಮ ಪರ್ಯಾಯ ಎಂದು ಪರಿಗಣಿಸಲಾಗಿದೆ. ಈ ತಂತ್ರಜ್ಞಾನದ ಮೂಲಕ ಸಸ್ಯಗಳ ಬೇರುಗಳಿಗೆ ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲದೆ ಕಡಿಮೆ ನೀರು ಮತ್ತು ಕಡಿಮೆ ಶಕ್ತಿಯಲ್ಲೇ ಉತ್ತಮವಾಗಿ ಬೆಳೆಯುವ ವ್ಯವಸ್ಥೆಯನ್ನು ಸಹ ರಚಿಸುತ್ತದೆ.

ರಿಮೋಟ್ ಸೆನ್ಸಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್

ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವು ರೈತರು ಮತ್ತು ಇತರರಿಗೆ ಲ್ಯಾಂಡ್ ಸ್ಕೇಪ್ ಮಟ್ಟದ ಡೇಟಾಸೆಟ್‌ಗಳನ್ನು ನೀಡುತ್ತದೆ. ಇದರ ಆಧಾರದ ಮೇಲೆ ನಿರ್ವಹಣಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಮಣ್ಣಿನ ಪ್ರಕಾರ, ನೀರಿನ ತಳದ ಆಳ, ಭೂ ಹೊದಿಕೆ, ಸಂಪನ್ಮೂಲ ಬಳಕೆ, ಪರಿಸರ ವ್ಯವಸ್ಥೆಯ ಡೇಟಾ, ಕೀಟ ಮತ್ತು ರೋಗದ ಡೇಟಾ ಮತ್ತು ಹವಾಮಾನವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಇಂಟರ್ನೆಟ್ ಆಫ್ ಥಿಂಗ್ಸ್ ಅಥವಾ IoT ಬಳಸಿಕೊಂಡು, ಸ್ಥಳೀಯ ಭೂ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮಾನವರಹಿತ ವೈಮಾನಿಕ ವಾಹನಗಳು (UAV) ಅಥವಾ ಡ್ರೋನ್‌ಗಳ ಮೂಲಕ ರಿಯಲ್ ಟೈಮ್ ಉಪಗ್ರಹ ಮಾಹಿತಿಯನ್ನು ಪಡೆಯುವಂತಹ ಅನೇಕ ಅವಕಾಶಗಳಿವೆ.

ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಡಿಜಿಟಲ್ ಇಮೇಜಿಂಗ್

ಈ ತಂತ್ರಜ್ಞಾನ ಬಳಸಿಕೊಂಡು, ಸುಲಭವಾಗಿ ಬೆಳೆ ರೋಗಗಳನ್ನು ಮೊದಲೇ ಪತ್ತೆ ಹಚ್ಚಬಹುದು.‌ ಇದು, ರೈತರು ಸಸ್ಯಗಳನ್ನು ಸ್ಕ್ಯಾನ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಸಂಭವನೀಯ ರೋಗಗಳ ಡೇಟಾಬೇಸ್‌ಗಳನ್ನು ಹೊಂದಿಸಬಹುದು.

ಒಂದು ಬೆಳೆಯ ಎಲ್ಲಾ ಡೇಟಾ ಬೇಸ್ ಅನ್ನು ಒಂದೇ ಕಡೆ ಸ್ಟೋರ್ ಮಾಡಬಹುದು. ಹೊಸ ರೋಗಗಳು ಪತ್ತೆಯಾದಂತೆ, ಡೇಟಾಬೇಸ್ ಅನ್ನು ನಿರ್ಮಿಸುವಾಗ,‌ ಆರಂಭಿಕ ಎಚ್ಚರಿಕೆ ವ್ಯವಸ್ಥೆಯನ್ನು ಒದಗಿಸುವಾಗ ಸ್ಕೇಲರ್‌ಗಳು ಅವುಗಳನ್ನು ಸ್ಮರಣೆಯಲ್ಲಿಡಲು ಸಹಾಯಕವಾಗಿದೆ. ಈಗಾಗಲೇ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸ್ಮಾರ್ಟ್‌ಫೋನ್ ಗಳಿಗೆಂದೆ ಕಡಿಮೆ ವೆಚ್ಚದ ಹೊಸ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಸಂವೇದಕವನ್ನ ಡೆವಲಪ್ ಮಾಡಲಾಗಿದೆ.

ಸೆಂಟಿನಲ್ ಸಸ್ಯಗಳು(Sentinal plants)

ಸಿಗ್ನಲಿಂಗ್ ಸಸ್ಯಗಳು ಎಂದು ಕರೆಯಲ್ಪಡುವ ಸೆಂಟಿನೆಲ್ ಸಸ್ಯಗಳು, ಬೆಳೆ ವ್ಯವಸ್ಥೆಗಳಲ್ಲಿ ಜೈವಿಕ ಅಥವಾ ಅಜೀವಕ ಒತ್ತಡದ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ. ಅವು ಎಲೆಗಳ ಬಣ್ಣವನ್ನು ಬದಲಾಯಿಸುವಂತಹ ಬೆಳೆ ಒತ್ತಡದ ಆರಂಭಿಕ ಸಂಕೇತಗಳನ್ನು ಸಹ ನೀಡುತ್ತವೆ. ಈ ಸಸ್ಯಗಳು ಕೀಟಗಳು ಮತ್ತು ರೋಗಗಳು, ಪೋಷಕಾಂಶಗಳ ಕೊರತೆಗಳು ಅಥವಾ ಮಣ್ಣಿನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳ ಬಗ್ಗೆ ಮೊದಲೇ ಎಚ್ಚರಿಕೆಯನ್ನು ನೀಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...