alex Certify ಲಕ್ಷಾಧಿಪತಿಯಾಗ್ಬೇಕಾ…..? ಹಾಗಿದ್ರೆ ಶುರು ಮಾಡಿ ಈ ವ್ಯವಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಾಧಿಪತಿಯಾಗ್ಬೇಕಾ…..? ಹಾಗಿದ್ರೆ ಶುರು ಮಾಡಿ ಈ ವ್ಯವಹಾರ

ವ್ಯಾಪಾರ ಶುರು ಮಾಡಲು ಬಯಸುವವರಿಗೆ ಇಲ್ಲೊಂದು ಉತ್ತಮ ಐಡಿಯಾ ಇದೆ. ಈ ವ್ಯಾಪಾರದಲ್ಲಿ, ವಾರ್ಷಿಕ  25,000 ರೂಪಾಯಿ ಖರ್ಚು ಮಾಡಿ, ಸರಾಸರಿ 1.75 ಲಕ್ಷ ರೂಪಾಯಿ ಲಾಭ ಗಳಿಸಬಹುದು. ಲಕ್ಷಾಧಿಪತಿ ಮಾಡುವ ಈ ವ್ಯವಹಾರ ಮೀನು ಸಾಕಾಣಿಕೆ. ಸದ್ಯ ತರಕಾರಿಗಳನ್ನು ಹೊರತುಪಡಿಸಿ, ರೈತರು ಮೀನುಗಾರಿಕೆಯತ್ತ ಗಮನ ಹರಿಸುತ್ತಿದ್ದಾರೆ. ಸರ್ಕಾರ, ಮೀನುಗಾರಿಕೆಯ ವ್ಯಾಪಾರವನ್ನು ಉತ್ತೇಜಿಸುತ್ತಿದೆ.

ಆಧುನಿಕ ತಂತ್ರಜ್ಞಾನದ ಮೂಲಕ ಮೀನುಗಾರಿಕೆಯಲ್ಲಿ ಹೆಚ್ಚು ಹಣ ಗಳಿಸಬಹುದು. ಬಯೋಫ್ಲೋಕ್ ಟೆಕ್ನಿಕ್ ಮೀನು ಸಾಕಾಣಿಕೆಗೆ ಬಹಳ ಪ್ರಸಿದ್ಧವಾಗುತ್ತಿದೆ. ಈ ತಂತ್ರವನ್ನು ಬಳಸಿ ಅನೇಕ ಜನರು ಲಕ್ಷಗಳಲ್ಲಿ ಗಳಿಸುತ್ತಿದ್ದಾರೆ. ಬಯೋಫ್ಲೋಕ್ ಟೆಕ್ನಿಕ್ ಒಂದು ಬ್ಯಾಕ್ಟೀರಿಯಾದ ಹೆಸರು. ಇದು ಮೀನು ಸಾಕಾಣಿಕೆಗೆಯನ್ನು ಸುಲಭಗೊಳಿಸುತ್ತದೆ. ಮೀನುಗಳನ್ನು ಸಾಕಲು ದೊಡ್ಡದಾದ ಟ್ಯಾಂಕ್‌ ಬೇಕಾಗುತ್ತದೆ.

ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಪ್ರಕಾರ, 7 ಟ್ಯಾಂಕ್‌ಗಳೊಂದಿಗೆ ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಬಯಸಿದರೆ, ಅವುಗಳನ್ನು ಸ್ಥಾಪಿಸಲು ನಿಮಗೆ ಸುಮಾರು 7.5 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದಾಗ್ಯೂ, ಕೊಳದಲ್ಲಿ ಮೀನುಗಳನ್ನು ಇಟ್ಟುಕೊಳ್ಳುವ ಮೂಲಕ ನೀವು ದೊಡ್ಡ ಹಣವನ್ನು ಗಳಿಸಬಹುದು. ಎರಡು ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಶುರು ಮಾಡಿದ ರೈತನೊಬ್ಬ ಈಗ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಗಳಿಸುತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...