alex Certify BIG NEWS: ಉಕ್ರೇನ್​​ ಮೇಲೆ ರಷ್ಯಾ ಏರ್​ ಸ್ಟ್ರೈಕ್; ಬೆಚ್ಚಿಬೀಳಿಸುವಂತಿದೆ ಉಪಗ್ರಹದಿಂದ ಸೆರೆಯಾದ ಚಿತ್ರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್​​ ಮೇಲೆ ರಷ್ಯಾ ಏರ್​ ಸ್ಟ್ರೈಕ್; ಬೆಚ್ಚಿಬೀಳಿಸುವಂತಿದೆ ಉಪಗ್ರಹದಿಂದ ಸೆರೆಯಾದ ಚಿತ್ರಗಳು

ರಷ್ಯಾ ಉಕ್ರೇನ್​ ಮೇಲೆ ದಾಳಿ ನಡೆಸಿದ ನಂತರ ಮೊದಲ ಸೆಟ್​ ಹೈ ರೆಸಲ್ಯೂಷನ್​ ಉಪಗ್ರಹ ಚಿತ್ರಗಳು ರಿಲೀಸ್​ ಆಗಿದ್ದು ಇದು ವೈಮಾನಿಕ ದಾಳಿಯ ಸಮಯದಲ್ಲಿ ಹಾನಿಗೊಳಗಾದ ವಿಮಾನ ನಿಲ್ದಾಣಗಳ ಬಳಿ ಇದ್ದ ಅಪಾರ್ಟ್​ಮೆಂಟ್​ಗಳನ್ನು ತೋರಿಸಿದೆ.

ನಿನ್ನೆ ಖಾರ್ಕಿವ್​​ ಬಳಿಕ ಚುಹುವಿವ್​​ ವಿಮಾನ ನಿಲ್ದಾಣದ ಮೇಲೆ ರಷ್ಯಾದ ಬಾಂಬರ್ ಜೆಟ್​ಗಳನ್ನು ಗುರಿಯಾಗಿಸಲಾಗಿದೆ. ಸ್ಪೇಸ್​ ಕಂಪನಿಯಾದ ಪ್ಲಾನೆಟ್​ ಲ್ಯಾಬ್ಸ್​​ ಈ ಉಪಗ್ರಹ ಚಿತ್ರಗಳನ್ನು ಒದಗಿಸಿದೆ. ಈ ಚಿತ್ರಗಳಲ್ಲಿ ರನ್​ ವೇ ಬಳಿಯಲ್ಲಿ ದೊಡ್ಡ ಹೊಗೆ ಆವರಿಸಿರುವುದನ್ನು ಕಾಣಬಹುದಾಗಿದೆ. ಮುಂಜಾನೆ ರಷ್ಯಾದ ವೈಮಾನಿಕ ದಾಳಿಯಿಂದ ರಾಡಾರ್​ ಹಾಗೂ ವಾಯು ರಕ್ಷಣಾ ವ್ಯವಸ್ಥೆಯು ಸಂಪೂರ್ಣವಾಗಿ ಹಾಳಾಗಿದೆ.

ಈ ದಾಳಿಯ ಬಳಿಕ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ ವಿಡಿಯೋಗಳಲ್ಲಿ ರಷ್ಯಾ ಏರ್​ಸ್ಟ್ರೈಕ್​​ನಲ್ಲಿ ನಾಗರಿಕ ಅಪಾರ್ಟ್​ಮೆಂಟ್​ಗಳು ಹಾನಿಗೊಳಗಾಗಿರುವುದನ್ನು ಕಾಣಬಹುದಾಗಿದೆ.

ಖಾರ್ಕಿವ್​ ಬಳಿಯ ರಷ್ಯಾದ ವೈಮಾನಿಕ ದಾಳಿಯ ನಂತರ ಚುಹುವಿವ್​ ವಿಮಾನ ನಿಲ್ದಾಣದ ಸಮೀಪವಿರುವ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿಯ ಕೆನ್ನಾಲಿಗೆಯನ್ನು ಉಪಗ್ರಹ ಚಿತ್ರವು ತೋರಿಸಿದೆ. (ಚಿತ್ರ ಕೃಪೆ : ಇಂಡಿಯಾ ಟುಡೇ)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...