alex Certify BIG BREAKING: ಯುದ್ಧದ ನಡುವೆ ಬೆಚ್ಚಿಬೀಳಿಸುವ ಘಟನೆ, ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ, ಚೆರ್ನೊಬಿಲ್ ಗಿಂತ 10 ಪಟ್ಟು ಅಪಾಯದ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಯುದ್ಧದ ನಡುವೆ ಬೆಚ್ಚಿಬೀಳಿಸುವ ಘಟನೆ, ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ, ಚೆರ್ನೊಬಿಲ್ ಗಿಂತ 10 ಪಟ್ಟು ಅಪಾಯದ ಎಚ್ಚರಿಕೆ

ಕೀವ್: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ರಷ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಫೈರಿಂಗ್ ನಡೆಸಿದೆ.

ಉಕ್ರೇನ್ ನ ಜಪೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ಫೈರಿಂಗ್ ಮಾಡಿದೆ. ಯುರೋಪ್ ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಇದಾಗಿದ್ದು, ಈ ಸ್ಥಾವರ ಮೇಲೆ ಎಲ್ಲ ಕಡೆಯಿಂದಲೂ ರಷ್ಯಾ ಗುಂಡು ಹಾರಿಸುತ್ತದೆ. ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಲ್ಲಿ ಈಗಾಗಲೇ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದೆ.

ಈ ಪರಮಾಣು ವಿದ್ಯುತ್ ಸ್ಥಾವರ ಸ್ಪೋಟಗೊಂಡಲ್ಲಿ ಭಾರಿ ಅಪಾಯವೇ ಕಾದಿದೆ. ಚರ್ನೋಬಿಲ್ ಗಿಂತ 10 ಪಟ್ಟು ಹೆಚ್ಚು ಅಪಾಯ ಸಂಭವಿಸುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವರು ಹೇಳಿಕೆ ನೀಡಿದ್ದಾರೆ. ಉಕ್ರೇನ್ ನ ಚೆರ್ನಿಹಿವ್ ನಲ್ಲಿ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ 22 ಉಕ್ರೇನಿಯನ್ನರು ಉಸಿರು ನಿಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...