alex Certify ಪುರುಷರು ನೈಟಿ​ ಧರಿಸುವ ಸಲಹೆಗೆ ಜೈ ಎಂದ ಜಾಲತಾಣಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರು ನೈಟಿ​ ಧರಿಸುವ ಸಲಹೆಗೆ ಜೈ ಎಂದ ಜಾಲತಾಣಿಗರು

Filipino Author's Suggestion for Men to Wear 'Nighties' in UK Heatwave Gets a Thumbs Upಯುಕೆ ದೇಶದ ವಿವಿಧ ಭಾಗಗಳಲ್ಲಿ ತೀವ್ರತರವಾದ ಶಾಖದ ಅಲೆ ಕಾಣಿಸಿದೆ. ಈ ನಡುವೆ ಟ್ವೀಟರ್​ ಥ್ರೆಡ್​ನಲ್ಲಿ ಹೀಟ್​ವೇವ್​ನಲ್ಲಿ ತಂಪಾಗಿರಲು ಹೇಗೆ ಎಂಬ ಸಲಹೆ ರಚನೆಯಾಗಿತ್ತು.

ಈಗ ವೈರಲ್​ ಆಗಿರುವ ಟ್ವಿಟರ್​ ಥ್ರೆಡ್​ ಫಿಲಿಪಿನೋಗಳ ಸುತ್ತ ಕೇಂದ್ರೀಕೃತವಾಗಿದೆ. ಯುಕೆ ಯಲ್ಲಿ ಜನರು ಸುಡುವ ಶಾಖದ ನಡುವೆ ತಣ್ಣಗಾಗಲು ಇರುವ ಮಾರ್ಗಗಳ ಬಗ್ಗೆ ವಿಶಿಷ್ಟ ಮತ್ತು ಉಲ್ಲಾಸ‌ಮಯ ಮಾರ್ಗಗಳ ಬಗ್ಗೆ ಚರ್ಚೆಯಾಗಿದೆ.

ಥ್ರೆಡ್​ ಹೇಳುವ ಮೊದಲನೆಯದು “ಸಡಿಲವಾದ ಹತ್ತಿ ಅಥವಾ ಲಿನಿನ್​ ಅನ್ನು ಧರಿಸುವುದು. ಇದಕ್ಕಾಗಿ, ಪುರುಷರು ನೈಟೀಸ್​ಗಳನ್ನು ಧರಿಸಲು ಆದ್ಯತೆ ನೀಡಬೇಕು ಎಂಬುದಾಗಿತ್ತು. ಫಿಲಿಪೈನ್ಸ್​ನಲ್ಲಿ ಇದಕ್ಕೆ “ಡಸ್ಟರ್​ ಡ್ರೆಸ್​’ ಎಂದು ಕರೆಯುವುದುಂಟು.

ಏನೂ ಮಾಡಬೇಡಿ ಎಲ್ಲಾ ವಿಂಡೋಗಳನ್ನು ತೆರೆಯಿರಿ‌ ಎಂದು ಹೇಳುವ ಮತ್ತೊಂದು ಸಲಹೆ ಇತ್ತು. ಎಲ್ಲಾ ಎಲೆಕ್ಟ್ರಿಕ್​ ಫ್ಯಾನ್​ಗಳನ್ನು ಆನ್​ ಮಾಡಿ ಸೋಫಾದಲ್ಲಿ ನಿದ್ರಿಸಿ ಎಂದೆಲ್ಲಾ ಸಲಹೆಗಳು ಬಂದಿತ್ತು.

ಥ್ರೆಡ್​ ವೈರಲ್​ ಆಗಿದ್ದು, ಫಿಲಿಪಿನೋ ಶೈಲಿ ಅನೇಕರಿಗೆ ಇಷ್ಟವಾಯಿತು. ನೆಟ್ಟಿಗರನೇಕರು ವಿಶೇಷವಾಗಿ ಪುರುಷರು ನೈಟಿ ಧರಿಸುವುದನ್ನು ಸೂಚಿಸುವ ಮೊದಲ ಸಲಹೆಯನ್ನು ಇಷ್ಟಪಟ್ಟಿದ್ದಾರೆ. ಒಂದಷ್ಟು ಸ್ವಾರಸ್ಯಕರ ಕಾಮೆಂಟ್​ಗಳೂ ಸಹ ಬಂದಿವೆ.

— Jill Damatac (@JillDamatac) July 18, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...